ವರದಿ : ದಿನೇಶ್ ರಾಯಪ್ಪಮಠ
ಕೋಟ: ಉಡುಪಿ ತಾಲೂಕಿನ ಕರಂಬಳ್ಳಿ ಜನತಾ ಕಾಲೋನಿಯ ನಿವಾಸಿಯಾಗಿರುವ ಸುದೀಪ್ (17ವರ್ಷ) ಇವರು ಕಳೆದ ಜು. 31 ರಂದು ಅಮ್ಮುಂಜೆಯಲ್ಲಿ ನಡೆದ ರಸ್ತೆ ಅಪಘಾತದಿಂದ ತಲೆಗೆ ತೀವ್ರವಾಗಿ ಗಾಯಗೊಂಡು ಕೋಮ ಸ್ಥಿತಿಯಲ್ಲಿದ್ದು, ಈಗ ಉಡುಪಿಯ ಆದರ್ಶ ಹಾಸ್ಪಿಟಲ್ನಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿರುವ ಇವರಿಗೆ ಜೈ ಕುಂದಾಪ್ರ ಸೇವಾ ಸಂಸ್ಥೆ ಹಾಗೂ ದಾನಿಗಳ ಸಹಾಯದಿಂದ ಒಟ್ಟು ಮಾಡಿದ 10,000/- ರೂ ಗಳ ಚೆಕ್ ನ್ನು ಅವರ ಕುಟುಂಬಿಕರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಜೈ ಕುಂದಾಪ್ರ ಸೇವಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಯರಾಜ್ ಪಡುಕೆರೆ ಹಾಗೂ ಸಂಸ್ಥೆಯ ಗೌರವ ಸಲಹೆಗಾರರಾದ ಆದಿತ್ಯ ಕೋಟ ಮತ್ತು ಸಂತೋಷ್ ಪಡುಕರೆ, ಪದಾಧಿಕಾರಿ ಕೋಟ ಸಂತೋಷ್, ಮನೀಶ್ ಕುಲಾಲ್, ಅಕ್ಷಯ ಕೋಟ, ರವಿ ಬಾರಿಕೆರೆ, ಶಿವರಾಜ್ ಪಡುಕರೆ, ಅಕ್ಷಿತ್ ಮೆಂಡನ್, ಶಿವರಾಂ ಕೋಡಿ, ಸತ್ಯ ಪ್ರಕಾಶ್ ಪಡುಕರೆ ಹಾಗೂ ಮಹಿಳಾ ಘಟಕದ ಸದಸ್ಯರಾಗಿರುವ ದಿವ್ಯ ಕುಂದಾಪುರ ಮತ್ತು ಕೀರ್ತನ ಉಪಸ್ಥಿತರಿದ್ದರು.
Advertisement. Scroll to continue reading.

In this article:Diksoochi news, diksoochi Tv, diksoochi udupi, jai kundpra seva samsthe
Click to comment

































