ಶಿರ್ವ : ಡೋನ್ ಬೋಸ್ಕೋ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ, ಸಂತ ಮೇರಿ ಪ್ರೌಢ ಶಾಲೆ ಹಾಗೂ ಸಂತ ಮೇರಿ ಪದವಿ ಪೂರ್ವ ಕಾಲೇಜಿನ ಬಹುಮಾನ ವಿತರಣಾ ಸಮಾರಂಭ ಶಿರ್ವದ ಸಾವುದ್ ಸಭಾ ಭವನದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿದ್ದ ಸಂತ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಶಾಲೆ ಮುದರಂಗಡಿ ಇಲ್ಲಿನ ಮುಖ್ಯೋಪಾಧ್ಯಾಯಿನಿ ಸುನೀತಾ ಡಿಸೋಜ ಮಾತನಾಡಿ, ಬಹುಮಾನ ಪಡೆಯುವುದು ಕೇವಲ ಗೆಲುವಿನ ಸಂಕೇತವಲ್ಲ ಅದರ ಹಿಂದೆ ಶಿಕ್ಷಕರ ಪರಿಶ್ರಮ, ಹೆತ್ತವರ ಪ್ರೋತ್ಸಾಹವಿರುತ್ತದೆ. ನಾಳೆಯ ಕುರಿತು ಕನಸು ಕಟ್ಟಿಕೊಂಡು ಅದನ್ನು ನನಸು ಮಾಡಲು ಪ್ರಯತ್ನಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅಧ್ಯಕ್ಷ ಸ್ಥಾನ ವಹಿಸಿದ್ದ ಅತಿ ವಂದನೀಯ ಫಾದರ್ ಡಾ.ಲೆಸ್ಲಿ ಸಿ. ಡಿಸೋಜ, ನಿಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪುರಸ್ಕರಿಸುವ ಕೆಲಸ ನಾವು ಮಾಡುತ್ತೇವೆ. ಪರಿಶ್ರಮ ಪಟ್ಟರೆ ಸಾಧನೆ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ ಅರಾನ್ಹ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಆರ್ ಪಾಟ್ಕರ್, ಸಂತ ಮೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಯಶಂಕರ್ ಕೆ., ಪ್ರಾಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಸಬೀನ ಪ್ರಿಯ ನೋರೊನ್ಹ, ಡೋನ್ ಬೋಸ್ಕೋ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸಂಧ್ಯಾ ಮೆಂಡೋನ್ಸ, ಕಾಲೇಜು ವಿಭಾಗದ ವಿದ್ಯಾರ್ಥಿ ನಾಯಕಿ ಜೆನಿಶಿಯಾ ಕಾಸ್ಟಲೀನೋ, ಉಪ ನಾಯಕ ಆಸ್ಟಿನ್ ಮಚಾದೋ, ಹೈಸ್ಕೂಲ್ ವಿಭಾಗದ ವಿದ್ಯಾರ್ಥಿ ನಾಯಕ ವಿಘ್ನೇಶ್, ಪ್ರಾಥಮಿಕ ಶಾಲಾ ವಿಭಾಗದ ನಾಯಕಿ ಪೂರ್ವಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಾಂಶುಪಾಲ ಜಯಶಂಕರ್ ಕೆ. ಎಲ್ಲರನ್ನು ಸ್ವಾಗತಿಸಿದರು. ಜಾನಕಿ ಮತ್ತು ಹವೀಶ್ ಕಾರ್ಯಕ್ರಮ ನಿರೂಪಿಸಿ, ಮೋಕ್ಷ ವಂದಿಸಿದರು.


































