ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ತಾಲೂಕಿನಲ್ಲೇ ಅತೀ ಹೆಚ್ಚು 575 ವಿದ್ಯಾರ್ಥಿಗಳನ್ನು ಹೊಂದಿದ ಸರಕಾರಿ ಹಿರಿಯ ಪ್ರಾಥಮಿಕ ( ಬೋರ್ಡ್ ಶಾಲೆ)ಗೆ ಮುನಿಯಾಲು ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದಿಕ್ ಮೆಡಿಕಲ್ ಸೈನ್ಸ್ ಮಣಿಪಾಲ ಇವರ ವತಿಯಿಂದ ಶಾಲಾ ವಠಾರದಲ್ಲಿ ಹಲವಾರು ಔಷಧೀಯ ಗುಣಗಳ ಸಸ್ಯಗಳನ್ನು ಬುಧವಾರ ನೆಡಲಾಯಿತು.

ಈ ಸಂದರ್ಭ ವೈದ್ಯಾಧಿಕಾರಿ ಡಾ. ಹರಿಪ್ರಸಾದ್ ಶೆಟ್ಟಿ ಮಾತನಾಡಿ, ಪ್ರಾಥಮಿಕ ಶಾಲಾ ಆವರಣದಲ್ಲಿ ಔಷಧೀಯ ಸಸ್ಯಗಳನ್ನು ನೆಟ್ಟು ಬೆಳೆಸಿದಲ್ಲಿ ಮಕ್ಕಳಿಗೆ ಸಸ್ಯಗಳಿಂದ ಮನುಷ್ಯರಿಗೆ ಎಷ್ಟು ಪ್ರಯೋಜನಕಾರಿ ಇದೆ ಎಂದು ತಿಳಿಯಲು ಸಹಕಾರಿಯಾಗುತ್ತದೆ ಎಂದರು.
ಈ ಸಂದರ್ಭ ಮುನಿಯಾಲು ಇನ್ಸ್ ಟ್ಯೂಟ್ ಆಫ್ ಆಯುರ್ವೇದಿಕ್ ಮೆಡಿಕಲ್ ಸಾಯನ್ಸ್ ಮುಖ್ಯಸ್ಥರಾದ ಡಾ. ಚಂದ್ರಕಾಂತ್ ಭಟ್ , ಶಾಲಾ ಶಾಲಾಭಿವೃದ್ಧಿ ಸಮಿತಿಯ ಅರುಣ್ ಭಂಡಾರಿ ಬೈಕಾಡಿ, ಸತೀಶ್ ಪೈ ಮುಖ್ಯೋಪಾದ್ಯಾಯಿನಿ ಜ್ಯೋತಿ, ಸುಲೋಚನ ಶೆಟ್ಟಿ ಇನ್ನಿತರ ಶಿಕ್ಷಕಿಯರು ಉಪಸ್ಥಿತರಿದ್ದರು.

ಈಗಾಗಲೇ ಬೋರ್ಡ್ ಶಾಲಾ ವಠಾರದಲ್ಲಿ ಉಪಯುಕ್ತ ಹಲವಾರು ಹಣ್ಣುಗಳ ಗಿಡವನ್ನು ನೆಡಲಾಗಿ ವಿದ್ಯಾರ್ಥಿಗಳನ್ನು ಮತ್ತು ಪೋಷಕರ ಗಮನ ಸೆಳೆಯುತ್ತಿದೆ.


































