ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಶ್ರೀ ಕಾಳಿಕಾಂಬಾ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದಲ್ಲಿ ಸರಳವಾಗಿ ವಿಶ್ವಕರ್ಮ ಪೂಜಾ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಬ್ರಹ್ಮಾವರ ತಹಶೀಲ್ದಾರ ರಾಜಶೇಖರ ಮೂರ್ತಿ ಭಾಗವಹಿಸಿ ಬಳಿಕ ಮಾತನಾಡಿ, ವಿಶ್ವಕರ್ಮ ಜಗತ್ತಿನ ಮೊದಲ ವಿಜ್ಞಾನಿ ವಿಶ್ವಕರ್ಮ. ಭಾರತ ದೇಶವನ್ನು ಇಂದು ವಿದೇಶಿಯರೂ ಕೂಡಾ ಆಗಮಿಸಿ ಇಲ್ಲಿನ ಪುರಾತನ ಶಿಲ್ಪ ಸೊಬಗನ್ನು ಕಂಡು, ಸಹಸ್ರಾರು ವರ್ಷದ ಹಿಂದೆ ಮಾಡಲಾದ ಕುಸುರಿ ಕೆತ್ತನೆ ಹಾಗೂ ಖಗೋಳ ಶಾಸ್ತ್ರದ ವಿಸ್ಮಯವನ್ನು ಮೆಚ್ಚುವಂತೆ ಮಾಡಿರುವುದು ವಿಶ್ವಕರ್ಮ ಸಮಾಜದ ಶಿಲ್ಪಿಗಳು ಎಂದರು.

ಪುರೋಹಿತ್ ಗೋಪಾಲಕೃಷ್ಣ ದೀಕ್ಷಿತ್ ಪೂಜಾ ಕಾರ್ಯ ನೆರವೇರಿಸಿದರು. ಸಂಘದ ಅಧ್ಯಕ್ಷ ಚಂದ್ರ ಆಚಾರ್ಯ , ಬ್ರಹ್ಮಾವರ ಕಂದಾಯ ನೀರೀಕ್ಷಕ ಲಕ್ಷ್ಮೀನಾರಾಯಣ ಭಟ್ ಇನ್ನಿತರರು ಉಪಸ್ಥಿತರಿದ್ದರು.
Advertisement. Scroll to continue reading.



































