ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ತಾಲೂಕು ಕಚೇರಿಯಲ್ಲಿ ಶುಕ್ರವಾರ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಜರುಗಿತು.
ತಾಲೂಕು ಪಂಚಾಯತಿ ಕಾರ್ಯನಿರ್ವಣಾಧಿಕಾರಿ ಇಬ್ರಾಹಿಂ ಪುರ ದೀಪ ಬೆಳಗಿಸಿ, ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭ ತಹಶೀಲ್ದಾರ್ ರಾಜಶೇಖರ ಮೂರ್ತಿ ಮಾತನಾಡಿ, ಜಗತ್ತಿನ ಸೃಷ್ಟಿಕರ್ತ ಅಂದರೆ ವಿಶ್ವಕರ್ಮ. ಇಂದಿನ ಕಾಲಘಟ್ಟದಲ್ಲಿ ಕೂಡಾ ಯಾವೂದೇ ಶಿಕ್ಷಣ ಇಲ್ಲದೆಯೂ ಕೂಡಾ ಕಲ್ಪನೆಯಲ್ಲಿ ದೇವರನ್ನು ಜ್ಞಾನ ಮತ್ತು ತಪಸ್ಸಿನ ಮೂಲಕ ದೇವರನ್ನು ಮತ್ತು ತಂತ್ರಜ್ಞಾನವನ್ನು ರೂಪಿಸಬಲ್ಲ ಜನಾಂಗವೊಂದು ಭಾರತದಲ್ಲಿ ಅಸ್ತಿತ್ವದಲ್ಲಿ ಇರುವುದು ವಿಶ್ವಕರ್ಮ ಜನಾಂಗ ಎಂದರು.

ಮುಖ್ಯ ಅತಿಥಿಯಾಗಿ ಪತ್ರಕರ್ತ ಬಂಡೀಮಠ ಶಿವರಾಮ ಆಚಾರ್ಯ ಮಾತನಾಡಿ, ವಿಶ್ವದ ಸೃಷ್ಠಿ ವಿಶ್ವಕರ್ಮನಿಂದ ಆಗಿದ್ದು, ಪಂಚ ತತ್ವ, ಪಂಚ ಶಿಲ್ಪದ ಮೂಲಕ ಮನುಷ್ಯ, ಜಲ ಚರ, ಜೀವಿ, ಸಸ್ಯಗಳ ಸೃಷ್ಠಿಯಾಗಿ ವಿಶ್ವದ ನಿಯಂತ್ರಣ ಮಾಡುವವ ವಿಶ್ವಕರ್ಮ. ನಾವು ಯಾವೂದೇ ದೇವರ ಪೂಜೆ ಪ್ರಾರ್ಥನೆ ಮಾಡಿದರೂ ಅದು ದೇವರ ದೇವ ವಿಶ್ವಕರ್ಮನನ್ನು ಪೂಜಿಸಿದಂತೆ ಎಂದರು.

ಉಪತಹಶೀಲ್ದಾರಾದ ರಾಘವೇಂದ್ರ , ದೇವಕಿ , ರವಿಶಂಕರ್ , ಕಂದಾಯ ನೀರೀಕ್ಷಕ ಲಕ್ಷ್ಮೀನಾರಾಯಣ ಭಟ್ ಇನ್ನಿತರರು ಉಪಸ್ಥಿತರಿದ್ದರು



































