ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಸಾಲಿಕೇರಿ ಸೇವಾ ಸಾಲಿಕೇರಿ ಇದರ 5ನೇ ವರ್ಷದ ವಾರ್ಷಿಕ ಮಹಾಸಭೆಯು ಭಾನುವಾರ ಶ್ರೀ ಬ್ರಹ್ಮಲಿಂಗ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಜರುಗಿತು.
ಮುಖ್ಯ ಅತಿಥಿ ದೇವದಾಸ್ ವಿ. ಶೆಟ್ಟಿಗಾರ್ ಮಾತನಾಡಿ, ಒಗ್ಗಟ್ಟಿನಲ್ಲಿ ಬಲವಿದೆ, ಸಂಘ ಸಂಸ್ಥೆಗಳಲ್ಲಿ ಒಗ್ಗಟ್ಟಿದ್ದರೆ ಉತ್ತಮ ಮೌಲ್ಯಯುತ ಹಾಗೂ ಸಮಾಜಮುಖಿ ಕಾರ್ಯಗಳನ್ನು ಮಾಡಲು ಸಾಧ್ಯ ಎಂದು ನುಡಿದರು.

ಈ ಸಂದರ್ಭ ದ್ವಿತೀಯ ಪಿಯುಸಿಯಲ್ಲಿ ಪೂರ್ಣಾಂಕ ಪಡೆದ ಕುಮಾರಿ ಸುರಭಿ, ಕುಮಾರಿ ಅನ್ವಿತಾ, ನಿವೃತ್ತ ಸೇನಾಧಿಕಾರಿ ಶಂಕರ ಶೆಟ್ಟಿಗಾರ್, ಹಿರಿಯ ನೇಕಾರ ಆನಂದಿ ಶೆಟ್ಟಿಗಾರ್ ಸಾಧಕರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಕೀಲ ಹಾಗೂ ಉಡುಪಿ ನಗರಸಭಾ ಸದಸ್ಯ ದೇವದಾಸ್ ವಿ.ಶೆಟ್ಟಿಗಾರ್ ಇವರನ್ನು ಸಮಿತಿಯ ವತಿಯಿಂದ ಅಭಿನಂದಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಸುಧಾಕರ್ ಶೆಟ್ಟಿಗಾರ್ ವಹಿಸಿದ್ದರು.
ಈ ಸಂದರ್ಭ ಶ್ರೀ ಕ್ಷೇತ್ರ ಸಾಲಿಕೇರಿ ಇದರ ಆಡಳಿತ ಮೊಕ್ತೇಸರರಾದ ಎಂ. ಬಾಲಕೃಷ್ಣ ಶೆಟ್ಟಿಗಾರ್, ಖ್ಯಾತ ವಕೀಲ ಹಾಗೂ ಉಡುಪಿ ನಗರಸಭಾ ಸದಸ್ಯ ದೇವದಾಸ ವಿ. ಶೆಟ್ಟಿಗಾರ್, ಸಮಿತಿಯ ಗೌರವಾಧ್ಯಕ್ಷ ಎಸ್. ರಾಘವ ಶೆಟ್ಟಿಗಾರ್, ಗೌರವ ಸಲಹೆಗಾರರಾದ ಎಸ್. ಸುರೇಶ್ ಶೆಟ್ಟಿಗಾರ್, ಉಪಾಧ್ಯಕ್ಷ ಜಗದೀಶ್ ಶೆಟ್ಟಿಗಾರ್, ಹೇಮಲತಾ ಶೆಟ್ಟಿಗಾರ್, ಪ್ರಧಾನ ಕಾರ್ಯದರ್ಶಿ ರಜನಿಕಾಂತ್ ಶೆಟ್ಟಿಗಾರ್, ಕೋಶಾಧಿಕಾರಿ ಮಹೇಶ್ ಕುಮಾರ್, ರಾಜೇಂದ್ರ ಶೆಟ್ಟಿಗಾರ್ ಬಸ್ರೂರು, ಎಸ್. ಟಿ ಶೆಟ್ಟಿಗಾರ್ ಮುದ್ರಾಡಿ, ಭಗವಾನ್ ದಾಸ್ ಕಿನ್ನಿಮುಲ್ಕಿ, ಶಿವಾನಂದ ಶೆಟ್ಟಿಗಾರ್ ಪರ್ಕಳ ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.
ಶ್ರೀಧರ್ ಶೆಟ್ಟಿಗಾರ್ ಸಾಲಿಕೇರಿ ಪ್ರಸ್ತಾವನೆಗೈದರು. ಪ್ರಭಾಕರ್ ಶೆಟ್ಟಿಗಾರ್ ಸ್ವಾಗತಿಸಿ, ಬಿ. ಶ್ರೀಧರ್ ಶೆಟ್ಟಿಗಾರ್ ವಂದಿಸಿದರು. ರಾಜೇಶ್ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಣೆ ಮಾಡಿದರು.


































