ವರದಿ : ದಿನೇಶ್ ರಾಯಪ್ಪನಮಠ
ಗಂಗೊಳ್ಳಿ : ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಕುಂದಾಪುರ ಹಾಗೂ ಬೈಂದೂರು ವಲಯದ ೭ ಮಂದಿ ಶಿಕ್ಷಕರನ್ನು ರೋಟರಿ ಜಿಲ್ಲೆ ೩೧೮೨, ವಲಯ ೧ರ ವತಿಯಿಂದ ರೋಟರಿ ವಲಯದ ೮ ರೋಟರಿ ಸಂಸ್ಥೆಗಳ ಸಹಯೋಗದಲ್ಲಿ ರೋಟರಿ ಕ್ಲಬ್ ಗಂಗೊಳ್ಳಿ ಆತಿಥ್ಯದಲ್ಲಿ ನಡೆದ ವಲಯ ಸಾಕ್ಷರತಾ ಸಮ್ಮೇಳನದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ರೋಟರಿ ಜಿಲ್ಲಾ ಲೀಟರಸಿ ಚೇರ್‌ಮನ್ ಕೆ.ಎಸ್. ಸುಬ್ರಮಣ್ಯ ಬಾಸ್ರಿ ಹಾಗೂ ವೈಸ್ ಚೇರ್‌ಮನ್ ಟಿ. ಬಾಲಚಂದ್ರ ಶೆಟ್ಟಿ ಅವರು ಪ್ರಶಸ್ತಿ ವಿಜೇತ ಶಿಕ್ಷಕರಾದ ಸಂತೋಷಕುಮಾರ ಶೆಟ್ಟಿ, ಚಂದ್ರ ಎನ್. ಬಿಲ್ಲವ, ಶ್ರೀನಿವಾಸ, ಕೃಷ್ಣಮೂರ್ತಿ ಪಿ., ಸುರೇಶ್ ಶೆಟ್ಟಿ, ಶೇಖರ್ ಗಾಣಿಗ ಮತ್ತು ಗಣೇಶ ಹೇರಳೆ ಅವರನ್ನು ಸನ್ಮಾನಿಸಿ ಗೌರವಿಸಿದರು. ರೋಟರಿ ಗಂಗೊಳ್ಳಿ ಅಧ್ಯಕ್ಷ ರಾಜೇಶ್ ಎಂ.ಜಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಅಸಿಸ್ಟೆಂಟ್ ಗವರ್ನರ್ ಜಯಪ್ರಕಾಶ್ ಶೆಟ್ಟಿ, ತರಬೇತುದಾರ ಸತೀಶ್ ಶೇರುಗಾರ್, ಸಲಹೆಗಾರ ಕೆ. ಕೆ. ಕಾಂಚನ, ವಲಯ ಸೇನಾನಿಗಳಾದ ಡಾ. ರಾಜಾರಾಮ್ ಶೆಟ್ಟಿ, ಕೆ.ರಾಮನಾಥ ನಾಯಕ್, ಕೋ-ಆರ್ಡಿನೇಟರ್ ಮಂಜುನಾಥ್ ಮಹಾಲೆ, ಅಶೋಕ ದೇವಾಡಿಗ ಉಪಸ್ಥಿತರಿದ್ದರು.
ಗಂಗೊಳ್ಳಿ ರೋಟರಿ ಸದಸ್ಯರಾದ ಪ್ರದೀಪ ಡಿ.ಕೆ. ಮತ್ತು ಚಂದ್ರಕಲಾ ಸನ್ಮಾನಿತರನ್ನು ಪರಿಚಯಿಸಿದರು. ಸುಗುಣ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ನಾರಾಯಣ ಇ.ನಾಯ್ಕ್ ವಂದಿಸಿದರು.
