ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಭಾರತೀಯ ವೈದ್ಯಕೀಯ ಸಂಘ ಕುಂದಾಪುರ ಶಾಖೆಯ 21-22ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಹೋಟೆಲ್ ಶೆರೋನ್ ಸಭಾಂಗಣದಲ್ಲಿ ಜರುಗಿತು. ಕುಂದಾಪುರದ ಎಲುಬು ಕೀಲು ತಜ್ಞ ಡಾ. ಸಂದೀಪ್ ನಾವಡಾ ಪಿ. ಅವರು ಅಧ್ಯಕ್ಷರಾಗಿ, ಮನೋರೋಗ ತಜ್ಞ ಡಾ. ರವೀಂದ್ರ ಮುನೋಳಿ ಕಾರ್ಯದರ್ಶಿಯಾಗಿ, ಮಕ್ಕಳ ತಜ್ಞ ಡಾ. ಗಣೇಶ ಪ್ರಸಾದ್ ಕಾಮತ್, ಖಜಾಂಚಿಯಾಗಿ ಅಧಿಕಾರ ಸ್ವೀಕರಿಸಿದರು. ಹಿರಿಯ ವೈದ್ಯ ಡಾ. ಭಾಸ್ಕರಾನಂದ ಕುಮಾರ್ ಪದಗ್ರಹಣ ನೆರವೇರಿಸಿದರು.
ಸಮಾರಂಭದಲ್ಲಿ ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಡಾ. ಕೆ.ಎನ್. ಕಾರಂತ್, ಡಾ. ಬಿ.ವಿ. ಉಡುಪ, ಡಾ. ಶ್ರೀದೇವಿ ಕಟ್ಟೆ, ಡಾ. ಪ್ರಮೀಳಾ ನಾಯಕ್, ಡಾ. ರೆನಿವಿಲ್ಸನ್ ಉಪಸ್ಥಿತರಿದ್ದರು.
Advertisement. Scroll to continue reading.
