ವರದಿ : ದಿನೇಶ್ ರಾಯಪ್ಪನಮಠ
ಕೋಟ: ಕೋಟ ಹಾಲು ಉತ್ಪಾದಕ ಸಹಕಾರಿ ಸಂಘದ ವಾರ್ಷಿಕ ಸಭೆ ಕೋಟದ ಮಣೂರು ಮಹಾಲಿಂಗೇಶ್ವರ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಕಾರ್ಯಕ್ರಮದಲ್ಲಿ ಕೆ.ಎಂ ಎಫ್ ಉಪವ್ಯವಸ್ಥಾಪಕ ಕೃಷಿ ಅಧಿಕಾರಿ ಶ್ರುತಿ ಕಾರ್ವಿ ಮಾಹಿತಿ ನೀಡಿ ಮಾತನಾಡಿ, ಹೈನುಗಾರಿಕೆಯಲ್ಲಿ ಯಶಸ್ಸು ಕಾಣಬೇಕಾದರೆ ಅದರ ನಿರ್ವಹಣೆಯಲ್ಲಿ ಶಿಸ್ತು ಅಗತ್ಯವಾಗಿದೆ. ಲಾಭವನ್ನು ಪಡೆಯಲು ಹೆಚ್ಚಿನ ಪೌಷ್ಟಿಕ ಆಹಾರವನ್ನು ಹೈನುಗಳಿಗೆ ಒದಗಿಸಬೇಕು, ದಂಟುಯುಕ್ತ ಹಸಿ ಹುಲ್ಲನ್ನು ನೀಡಬೇಕು ಆಗ ಮಾತ್ರ ಹಾಲಿನಲ್ಲಿ ಏರುಗತಿ ಕಾಣುವುದರ ಜೊತೆಗೆ ಅಧಿಕ ಫ್ಯಾಟ್ ಬರಲು ಸಾಧ್ಯವಾಗುತ್ತದೆ ಎಂದರು.
ಕೆ.ಎಂ.ಎಫ್‍ನ ವಿಸ್ತೀರ್ಣಾಧಿಕಾರಿ ಸರಸ್ವತಿ ಹೈನುಗಾರಿಕೆ ಲಾಭದಾಯಕ ಉದ್ಯಮವಾಗಿಸಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲು ಉತ್ಪಾದಕರಾದ ಪ್ರಕಾಶ್ ಶೆಟ್ಟಿ, ಶಾರದ ಆಚಾರ್ಯ, ಜಿ.ರಾಜೀವ ದೇವಾಡಿಗ, ಕೆ.ರಾಜು ಪೂಜಾರಿ, ಭಾಗೀರಥಿ ಪೂಜಾರಿ ಅವರನ್ನು ಗೌರವಿಸಲಾಯಿತು.
ಕೋಟ ಸಹಕಾರಿ ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷ ನರಸಿಂಹ ಪೂಜಾರಿ, ನಿರ್ದೇಶಕರಾದ ಶ್ರೀಕಾಂತ ಮಯ್ಯ, ವಿಜಯ, ಸುಶೀಲ, ಜೋಸೇಫ್ ಪುಡ್ತಾಡೋ, ರಮಾನಂದ ಉರಾಳ ಮತ್ತಿತರರು ಉಪಸ್ಥಿತರಿದ್ದರು.
ವಾರ್ಷಿಕ ವರದಿಯನ್ನು ಸಂಘದ ನಿರ್ದೇಶಕ ಕೃಷ್ಣ ದೇವಾಡಿಗ ವಾಚಿಸಿದರು. ಕಾರ್ಯಕ್ರಮವನ್ನು ಸಂಘದ ಕಾರ್ಯದರ್ಶಿ ರಾಜೇಶ್ ನಿರೂಪಿಸಿ, ವಂದಿಸಿದರು.



































