ವರದಿ : ದಿನೇಶ್ ರಾಯಪ್ಪನಮಠ
ಕೋಟ: ಯಕ್ಷಗಾನ ಕ್ಷೇತ್ರದ ಹಿಮ್ಮೇಳ ವಿಭಾಗಕ್ಕೆ ಹಂಗಾರಕಟ್ಟೆ ಕಲಾಕೇಂದ್ರದ ಕೊಡುಗೆ ಅನನ್ಯವಾದದ್ದು ಎಂದು ಹೆಸರಾಂತ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ ಹೇಳಿದ್ದಾರೆ.
ಅವರು ರಸರಂಗ ಕೋಟ, ರಂಗಸಂಶೋಧನಾ ಕೇಂದ್ರ ಬೆಂಗಳೂರು ಇವರ ಸಹಯೋಗದಲ್ಲಿ ಸದಾನಂದ ರಂಗಮಂಟಪ ಗುಂಡ್ಮಿಯಲ್ಲಿ ಆಯೋಜಿಸಿದ್ದ ‘ಇವ ನಮ್ಮವ ‘ ಐರೋಡಿ ರಾಜಶೇಖರ ಹೆಬ್ಬಾರರೊಂದಿಗಿನ ರಂಗಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಯಕ್ಷಗಾನ ಕಲಾವಿದ ಸಂಘಟಕ ಐರೋಡಿ ರಾಜಶೇಖರ ಹೆಬ್ಬಾರ್ರ ಯಕ್ಷಗಾನದೆಡೆಗಿನ ಬದ್ಧತೆ, ಯಕ್ಷಗಾನದ ಸೇವೆ ಕಲಾಕ್ಷೇತ್ರದಲ್ಲಿ ಬಹುದೊಡ್ಡ ಕೊಡುಗೆಯನ್ನು ನೀಡಿದೆ. ಅವರಿಗೆ ಇನ್ನೂ ಹಿರಿದಾದ ಸ್ಥಾನ ದೊರೆಯಲಿ ಅದರಿಂದ ಯಕ್ಷಗಾನ ರಂಗಕ್ಕೆ ಇನ್ನೂ ಹೆಚ್ಚಿನ ಲಾಭವೇ ಆಗಲಿದೆ ಎಂದು ನುಡಿದರು.
ನಂತರ ಅಹ್ವಾನಿತ ರಂಗಮಿತ್ರರೊಂದಿಗಿನ ರಾಜಶೇಖರ ಹೆಬ್ಬಾರ್ ರಂಗಸಂವಾದ ಕಾರ್ಯಕ್ರಮ ಸಂಪನ್ನಗೊಂಡಿತು.
ರಸರಂಗದ ಅಧ್ಯಕ್ಷೆ ಸುಧಾ ಮಣೂರು ಪ್ರಸ್ತಾವನೆ ಸಲ್ಲಿಸಿ ಸ್ವಾಗತಿಸಿದರು. ರಂಗನಟ ಪುನೀತ್ ಶೆಟ್ಟಿ ವಂದಿಸಿದರು. ನಿವೃತ್ತ ಶಿಕ್ಷಕ ರಾಮಚಂದ್ರ ಐತಾಳ ಕಾರ್ಯಕ್ರಮ ನಿರ್ವಹಿಸಿದರು.



































