ವರದಿ : ಬಿ.ಎಸ್.ಆಚಾರ್ಯ
ಬಾರ್ಕೂರು : ರೋಟರಿ ಕ್ಲಬ್ ಬಾರ್ಕೂರು ಇವರ ವತಿಯಿಂದ ರೋಟೇರಿಯನ್ ದಿವಂಗತ ರಾಜೇಶ್ ಶೆಟ್ಟಿ ಹೆಸರಿನಲ್ಲಿ ನಿರ್ಮಾಣಗೊಂಡಿರುವ ನಡೂರು ಕಲರಾಶಿಯಲ್ಲಿ ಪ್ರಯಾಣಿಕರ ತಂಗುದಾಣ ಉದ್ಘಾಟನೆಗೊಂಡಿತ್ತು. ತಂಗುದಾಣವನ್ನು ರೋಟೇರಿಯನ್ ದಿವಂಗತ ರಾಜೇಶ್ ಶೆಟ್ಟಿ ಇವರ ತಂದೆ ವಿಠ್ಠಲಶೆಟ್ಟಿ ಇವರು ಉದ್ಘಾಟಿಸಿದರು. ಅಸಿಸ್ಟೆಂಟ್ ಗವರ್ನರ್ ಕೆ ಪದ್ಮನಾಭ ಕಾಂಚನ್ ಬೋರ್ಡ್ ಅನಾವರಣ ಮಾಡಿದರು.
ಕಾರ್ಯಕ್ರಮದಲ್ಲಿ ಬಾರ್ಕೂರು ರೋಟರಿ ಅಧ್ಯಕ್ಷ ಚರಣ್ ಬಿ. ಶೆಟ್ಟಿ , ರೋಟರಿ ಜಿಲ್ಲೆ 3182 ವಲಯ ಮೂರರ ಅಸಿಸ್ಟೆಂಟ್ ಗವರ್ನರ್ ರೋಟೇರಿಯನ್ ಕೆ. ಪದ್ಮನಾಭ ಕಾಂಚನ್, ವಲಯ 3ರ ವಲಯ ಪ್ರತಿನಿಧಿ ರೋಟೇರಿಯನ್ ವಿಜಯಕುಮಾರ್ ಶೆಟ್ಟಿ ,ಕಾಡೂರು ನಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಂಡುರಂಗ ಶೆಟ್ಟಿ, ಪಂಚಾಯತ್ ಸದಸ್ಯರಾದ ಸತೀಶ್ ಕುಲಾಲ್, ಗಿರಿಜಾಬಾಯಿ, ಅಮಿತಾ, ಬಿಲ್ಲಾಡಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ಬಾರ್ಕೂರು ರೋಟರಿಯ ಹಿರಿಯ ಸದಸ್ಯ ರೋಟೇರಿಯನ್ ಸುಧಾಕರ್ ರಾವ್ ನಿರೂಪಿಸಿದರು.ವಬಾರಕೂರು ರೋಟರಿ ಕಾರ್ಯದರ್ಶಿ ರೋಟೇರಿಯನ್ ಪ್ರಕಾಶ್ ತಂತ್ರಿ ವಂದಿಸಿದರು.


































