ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಅಜಪುರ ಕರ್ನಾಟಕದ ಸಂಘದ ಮಹಾಸಭೆ ಮತ್ತು 66ನೇ ವರ್ಷದ ನಾಡಹಬ್ಬದ ಕಾರ್ಯಕ್ರಮ ಅ. 15 ರಂದು ಬ್ರಹ್ಮಾವರದ ಉನ್ನತಿ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಚ್.ನಿತ್ಯಾನಂದ ಶೆಟ್ಟಿ ಹಾರಾಡಿ ತಿಳಿಸಿದರು.
ಬ್ರಹ್ಮಾವರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಅವರು ಅಂದು ಸಂಜೆ 3 ಗಂಟೆಯಿಂದ ನಡೆಯುವ ಸಮಾರಂಭದಲ್ಲಿ ತಹಶೀಲ್ದಾರ್ ರಾಜಶೇಖರ ಮೂರ್ತಿ ಅಧ್ಯಕ್ಷತೆ ವಹಿಸುವರು. ನಿವೃತ್ತ ಶಿಕ್ಷಕ ಹಾಗೂ ಸಾಹಿತಿ ಅಲ್ಫೋನ್ಸ್ ಡಿಸೋಜಾ ಅವರಿಗೆ ಸುವರ್ಣ ನಿಧಿ ಸನ್ಮಾನ ಹಾಗೂ ಯಕ್ಷಗಾನ ಪ್ರಸಾಧನ ಕಲಾವಿದ ಬಾಲಕೃಷ್ಣ ನಾಯಕ್ ಹಂದಾಡಿ ಅವರಿಗೆ ಹಾರಾಡಿ ರಾಮ ಗಾಣಿಗ, ಮಟಪಾಡಿ ವೀರಭದ್ರ ನಾಯಕ್ ಹಂದಾಡಿ ಸುಬ್ಬಣ್ಣ ಭಟ್, ಹಾಸ್ಯಗಾರ ಚಂದು ನಾಯಕ್ ಸ್ಮಾರಕ ದತ್ತಿನಿಧಿಯಿಂದ ಸನ್ಮಾನಿಸಲಾಗುವುದು.
ನಂತರ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಶ್ರೀರಾಮ ಕಾರುಣ್ಯ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಮೋಹನ್ ಉಡುಪ, ಕೋಶಾಧಿಕಾರಿ ಆರ್.ಟಿ ಭಟ್, ದಿನಕರ ಶೆಟ್ಟಿ, ಸೂರ್ಯ ಕುಮಾರ್ ಉಪಸ್ಥಿತರಿದ್ದರು



































