ಉಡುಪಿ : ಆಶ್ವೀಜ ಮಾಸ ಶುಕ್ಲ ಪಕ್ಷದ ಶರನ್ನವರಾತ್ರಿಯ ನವಮಿ ಶುಭದಿನವಾದ ಇಂದು ಕಡಿಯಾಳಿ ಮಹಿಷಮರ್ಧಿನಿ ಸನ್ನಿಧಾನದಲ್ಲಿ ಉಡುಪಿ ತಾಲ್ಲೂಕು ಬ್ರಾಹ್ಮಣ ಸಭಾ ಕಡಿಯಾಳಿ ವಲಯದ ವಿಪ್ರ ಮಹಿಳೆಯರಿಂದ ಉದಯಾಸ್ತಮಾನ ಲಕ್ಷ್ಮೀ ಶೋಭಾನೆ ಪಾರಾಯಣ ಸಂಭ್ರಮದಿಂದ ಜರುಗಿತು. ಸುಮಾರು 150-200 ಕ್ಕೂ ಹೆಚ್ಚು ವಿಪ್ರ ಮಹಿಳೆಯರು ಈ ಪುಣ್ಯಕಾರ್ಯದಲ್ಲಿ ಪಾಲ್ಗೊಂಡರು.

ಈ ಪ್ರಯುಕ್ತ ಋತ್ವಿಜರ ನೇತೃತ್ವದಲ್ಲಿ ಶ್ರೀ ದೇವಳದಲ್ಲಿ ಲಕ್ಷ್ಮೀ ಹೃದಯ ಹವನ ಸಂಪನ್ನಗೊಂಡಿತು. ಅಲ್ಲದೆ, ವಿಪ್ರರಿಂದ ಪುರುಷ ಸೂಕ್ತದ ಜೊತೆಗೆ 15 ಬಾರಿ ಶ್ರೀಸೂಕ್ತ ಪಾರಾಯಣವೂ ನಡೆಯಿತು.

ಜೀರ್ಣೋದ್ದಾರಗೊಳ್ಳುತ್ತಿರುವ ಶ್ರೀದೇವಳದಲ್ಲಿ ಸಾವಿರಾರು ಭಕ್ತರು ನವರಾತ್ರಿಯ ಪ್ರಯುಕ್ತ ತಾಯಿ ಮಹಿಷಮರ್ಧಿನಿಯ ದಿವ್ಯ ದರ್ಶನವನ್ನು ಪಡೆದರು. ಭಕ್ತಾದಿಗಳಿಗೆ ಶ್ರೀದೇವರ ಅನ್ನ ಪ್ರಸಾದದ ವ್ಯವಸ್ಥೆ ಶ್ರೀದೇವಳದಿಂದ ಮಾಡಲಾಗಿತ್ತು.


In this article:Diksoochi news, diksoochi Tv, diksoochi udupi, kadiyali mahishamardhini temple
Click to comment

































