ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ನಗರದ ಮಧ್ಯ ಭಾಗದಲ್ಲಿ 35 ವರ್ಷದ ಹಿಂದೆ ಜಂಟ್ಸ್ ಟೈಲರಿಂಗ್ ನಿಂದ ಆರಂಭಗೊಂಡ ಪ್ರಸಿದ್ಧಿಯಾದ ಕೆ ಎನ್ ಟೈಲರ್ಸ್ ಪುರುಷರ ಫ್ಯಾಷನ ನಲ್ಲಿ ಪ್ರಸಿದ್ಧಿಯಾಗಿ ಇದೀಗ ಹೋಲೀಫ್ಯಾಮಿಲಿ ಕಾಂಪ್ಲೆಕ್ಸ್ ನಲ್ಲಿ ವಿಶಾಲವಾದ ಹೊಸ ಶೋರೂಂ ನಲ್ಲಿ ಕೆ.ಎನ್ ಫ್ಯಾಷನ್ ಉದ್ಘಾಟನೆಗೊಂಡಿತು.
ಬಿ.ಕೆ ಉಮೇಶ್ ಜೋಗಿ ದೀಪ ಬೆಳಗಿ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ತಾಲೂಕು ಕೇಂದ್ರವಾಗಿ ಪ್ರಗತಿಹೊಂದುತ್ತಿರುವ ಬ್ರಹ್ಮಾವರದಲ್ಲಿ ಪುರುಷರ ಫ್ಯಾಷನ್ ಬೇಡಿಕೆಗೆ ಎಲ್ಲಾ ತರದ ಬಟ್ಟೆಗಳು ಒಂದೆ ಕಡೆ ಸಿಗುವಂತೆ ಮಾಡಿ ದೂರದ ಊರಿಗೆ ಹೋಗುವ ಸಮಯ- ಶ್ರಮ ಕಡಿಮೆಯಾಗಿ ಗ್ರಾಹಕರಿಗೆ ಉಪಯುಕ್ತವಾಗಿದೆ ಎಂದು ಹೇಳಿ ಸಂಸ್ಥೆಗೆ ಶುಭ ಹಾರೈಸಿದರು.

ದಂತ ವೈದ್ಯ ಡಾ ಬಿ. ಲಕ್ಷ್ಮಣ ಹೆಗ್ಡೆ , ನಿವೃತ್ತ ಬ್ಯಾಂಕ್ ಅಧಿಕಾರಿ ಜಯರಾಮ ನಾಯಕ್ , ಸಂಸ್ಥೆಯ ಮಾಲಕ ಬಿ,ಕೆ ನಾಗೇಶ್ ಮತ್ತು ಸಿಬ್ಬಂದಿಗಳು ಹಾಜರಿದ್ದರು.
ಅನೇಕ ಗಣ್ಯರು ಆಗಮಿಸಿ ಸಂಸ್ಥೆಗೆ ಶುಭ ಹಾರೈಸಿದರು.
Advertisement. Scroll to continue reading.

In this article:brahmavar, Diksoochi news, diksoochi Tv, diksoochi udupi, K.N.fashion
Click to comment

































