ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ವ್ಯಾಪಾರದಿಂದ ಬರುವ ಲಾಭದಲ್ಲಿ ಅಶಕ್ತರಿಗೆ ಸಹಾಯ ಮಾಡುವ ಅಮ್ಮ ಪಟಾಕಿ ಮೇಳಕ್ಕೆ 4 ವರ್ಷಗಳ ಸಂಭ್ರಮ. ಈ ಬಾರಿ ಅಮ್ಮ ಪಟಾಕಿ ಮೇಳದ ಮೂಲಕ ವ್ಯಾಪಾರದ ಒಂದು ಭಾಗವನ್ನು ಕ್ಯಾನ್ಸರ್ ನ ಪೀಡಿತ ಮಗುವಿಗೆ ವೈದ್ಯಕೀಯ ನೆರವಿಗಾಗಿ ಹಮ್ಮಿಕೊಂಡಿದೆ. ಕುಂದಾಪುರ ನೆಹರು ಮೈದಾನದಲ್ಲಿ ಅಮ್ಮ ಪಟಾಕಿ ಮೇಳ ನಡೆಯಲಿದೆ.
ವ್ಯಾಪಾರವೆಂದರೆ ಕೇವಲ ಲಾಭ ಮಾಡಿಕೊಂಡು ಸ್ವಂತ ಬದುಕನ್ನಷ್ಟೇ ಕಟ್ಟಿಕೊಳ್ಳುವ ಮನಸ್ಥಿತಿ ಅಮ್ಮ ಪಟಾಕಿ ಮೇಳದ್ದಲ್ಲ. ಇಲ್ಲಿನ ಪಟಾಕಿ ಕೊಂಡು ಸಿಡಿಸಿ ಸಂಭ್ರಮಿಸುವತ್ತ ಮಂದಿ ಸಾಗಿದರೆ ಸಾಕು, ಇತ್ತ ಅಶಕ್ತ ಜೀವಗಳ ಬಾಳಿನಲ್ಲಿ ಬೆಳಕು ಚೆಲ್ಲುವ ಕೆಲಸವನ್ನು ಅಮ್ಮ ಪಟಾಕಿ ಮೇಳದ ಸಂಘಟಕರು ಮಾಡುತ್ತಾರೆ. ಈ ಮಹಾನ್ ಕಾರ್ಯ ಕಳೆದ ಮೂರು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ.
Advertisement. Scroll to continue reading.



































