ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಕಳೆದೆರಡು ದಿನದಿಂದ ಮಳೆ ಕಡಿಮೆ ಆದ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ಭತ್ತವನ್ನು ಬೆಳೆದ ರೈತರು ದೀಪಾವಳಿ ಹಬ್ಬದ ಮೊದಲು ಭತ್ತದ ಕಟಾವು ಮಾಡಿ ಧಾನ್ಯ ಲಕ್ಚ್ಮೀಯನ್ನು ಮನೆ ತುಂಬಿಸಿಕೊಳ್ಳುವ ಸಿದ್ಧತೆಯಲ್ಲಿದ್ದಾರೆ.
ಗುರುವಾರ ಮತ್ತು ಶುಕ್ರವಾರ ಹೊರ ರಾಜ್ಯದಿಂದ ಬಂದ ಕಟಾವು ಯಂತ್ರಗಳ ಮೂಲಕ ರಾತ್ರಿ ಹಗಲು ಎನ್ನದೆ ಕಟಾವು ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ಸಣ್ಣ ರೈತರು ಮತ್ತು ಯತ್ರಗಳು ಹೋಗಲು ಅಸಾಧ್ಯವಾಗುವ ಕಡೆಯಲ್ಲಿ ಕೈಯಿಂದ ಕಟಾವು ಮಾಡುತ್ತಿರುವುದು ಕೂಡಾ ಕೆಲವು ಭಾಗದಲ್ಲಿ ಕಂಡು ಬರುತ್ತಿದೆ.

ಈ ವರ್ಷ ಬಹುತೇಕ ಕಡೆಯಲ್ಲಿ ಭತ್ತದ ಪೈರು ಉತ್ತಮ ಫಸಲು ನೀಡಿದ್ದು, ಕಳೆದ ಕೆಲವು ದಿನದಿಂದ ಬಂದ ಅಕಾಲಿಕ ಮಳೆಯಿಂದ ಸ್ವಲ್ಪ ಮಟ್ಟಿಗೆ ಹಾನಿಯಾಗಿದೆ.
ಇಂದು ವಾರ ಮಳೆಯು ಬಾರದಿದ್ದಲ್ಲಿ ಬಹುತೇಕ ರೈತರ ಕಟಾವು ಕಾರ್ಯ ಮುಗಿಯಲಿದೆ.
ಸರಕಾರ ಜಿಲ್ಲಾಡಳಿತ ಕಟಾವು ಯಂತ್ರದ ಬಾಡಿಗೆ ದರವನ್ನು ಗಂಟೆಗೆ 1800 ರೂ ನಿಗದಿ ಮಾಡಿದ್ದರೂ ಬಹುತೇಕ ಕಡೆಯಲ್ಲಿ ರೈತರು ಗಂಟೆಗೆ 2600 ನೀಡಿ ಕಟಾವು ಕಾರ್ಯ ಮಾಡಿಕೊಳ್ಳಬೇಕಾಗಿದೆ ಎಂಬ ದೂರು ಕೇಳಿ ಬರುತ್ತಿದೆ.




































