Connect with us

Hi, what are you looking for?

Diksoochi News

ಕರಾವಳಿ

ಕುತೂಹಲ ಹೆಚ್ಚಿಸಿದೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ!

0

ವರದಿ : ಬಿ.ಎಸ್.ಆಚಾರ್ಯ

ಉಡುಪಿ: ವಿಧಾನ ಪರಿಷತ್ ಚುನಾವಣೆ ಕಾವು ಏರುತ್ತಿದ್ದರೆ ಉಡುಪಿ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಬಾರೀ ಕೂತೂಹಲ ಮೂಡಿಸುತ್ತಿದೆ.
ಉಡುಪಿ ಜಿಲ್ಲೆಯಾದ ಬಳಿಕ ಕನ್ನಡ ಸಾಹಿತ್ಯ ಪರಿಷತ್‍ಗೆ ಕುಂದಾಪುರದ ಎ.ಎಸ್.ಎನ್. ಹೆಬ್ಬಾರ್ , ಉಪ್ಪುಂದ ಚಂದ್ರಶೇಖರ ಹೊಳ್ಳ , ಅಂಬಾತನಯ ಮುದ್ರಾಡಿ ಅಧ್ಯಕ್ಷರಾಗಿದ್ದು, ಕಳೆದ ಹತ್ತು ವರ್ಷದಿಂದ ನಿವೃತ್ತ ಶಿಕ್ಷಕ ನೀಲಾವರ ಸುರೇಂದ್ರ ಅಡಿಗರು ಅಧ್ಯಕ್ಷರಾಗಿದ್ದು, ಈ ಬಾರಿ ಕೂಡಾ ಜಿಲ್ಲಾ ಅಧ್ಯಕ್ಷಗಾದಿಗೆ ಸ್ವರ್ಧೆಯಲ್ಲಿದ್ದಾರೆ.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ಹಲವಾರು ಸಮಯದಿಂದ ಕ್ರೀಯಾಶೀಲರಾಗಿದ್ದ ಬ್ರಹ್ಮಾವರ ಕುಂಜಾಲು ಮೂಲದ ಸುಬ್ರಹ್ಮಣ್ಯ ಬಾಸ್ರಿ ಮತ್ತು ಬೈಂದೂರು ಭಾಗದ ಡಾ.ಸುಬ್ರಹ್ಮಣ್ಯ ಭಟ್ ಅಧ್ಯಕ್ಷ ಸ್ಥಾನಕ್ಕೆ ಸ್ವರ್ಧೆಯಲ್ಲಿದ್ದಾರೆ.
ಈ ಬಾರಿ ನವೆಂಬರ್ 21 ಭಾನುವಾರ 7 ತಾಲೂಕಿನ 8 ಮತಗಟ್ಟೆಯಲ್ಲಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಉಡುಪಿ ಜಿಲ್ಲೆಯಲ್ಲಿ ಒಟ್ಟು ಕೇವಲ 1987 ಮತದಾರರಿದ್ದು, 254 ಬೈಂದೂರು, 435 ಕುಂದಾಪುರ, 302 ಕೋಟ , 140 ಬ್ರಹ್ಮಾವರ , 451 ಉಡುಪಿ, 136 ಕಾಪು ಮತ್ತು 135 ಹೆಬ್ರಿ, 134 ಕಾರ್ಕಳ ಇದ್ದಾರೆ. ಮತದಾರರಲ್ಲಿ ನಾನಾ ಕಾರಣದಿಂದ ಅನೇಕರು ಇಲ್ಲದಿದ್ದು, ಇರುವ ಮತದಾರರು ಅಧ್ಯಕ್ಷರನ್ನು ಮತದಾನದ ಮೂಲಕ ಚುನಾಯಿಸಲಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ಹೆಸರಿಗೆ ಇದ್ದರೂ , ಕನ್ನಡದ ಮನಸ್ಸುಗಳನ್ನು ಸರಿಯಾಗಿ ಬೆಸೆಯಲು ಇನ್ನೂ ಕೂಡಾ ಸಾದ್ಯವಾಗಿಲ್ಲ ಎಂದೇ ಹೇಳಬಹುದು. ಕೇವಲ ಕೆಲವೇ ಜನರು ಇದರ ಸದಸ್ಯರಾಗಿದ್ದು ಕನ್ನಡ ಭಾಷೆಯನ್ನು ಬರೆಯಲು ಮಾತನಾಡಲು ತಿಳಿದವರು ಮತ್ತು ಭಾಷೆಯನ್ನು ಬಿತ್ತರಿಸುವ ಮತ್ತು ಬೆಳೆಸುವ ಪತ್ರಕರ್ತರು , ಕನ್ನಡ ಶಾಲಾ ಶಿಕ್ಷಕರು , ಯಕ್ಷಗಾನ, ಜನಪದ ಕಲಾವಿದರ ಸದಸ್ಯತ್ವ ಬಾರಿ ವಿರಳ ಇದ್ದು , ಮುಂದಿನ ದಿನದಲ್ಲಿ ಯಾರು ಚುನಾಯಿತರಾದರೂ ತಾಲೂಕು, ಗ್ರಾಮ, ಹೋಬಳಿ ಮಟ್ಟದಲ್ಲಿ ಕನ್ನಡ ಮನಸುಗಳನ್ನು ಕಟ್ಟುವ, ಸದಸ್ಯರನ್ನು ಹೆಚ್ಚಿಸುವ ಕಾರ್ಯ ಕನ್ನಡ ಸಾಹಿತ್ಯ ಪರಿಷತ್ ನಿಂದ ಆಗಬೇಕಾಗಿದೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!