ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಕೋಚಿವೆಲಿ ಎಲ್ ಟಿ ಟಿ ಎಕ್ಸ್ಪ್ರೆಸ್ 22113 ರೈಲನ್ನು ಕುಂದಾಪುರ ರೈಲ್ವೇ ನಿಲ್ದಾಣದಲ್ಲಿ ನಿಲ್ಲಿಸಲು ಸೂಚಿಸುವಂತೆ ಕೋರಿ ಕೇಂದ್ರೀಯ ರೈಲ್ವೇ ಮಂತ್ರಿ ಅಶ್ವಿನಿ ವೈಷ್ಣವ ಅವರಿಗೆ ಪತ್ರ ಮುಖೇನ ಕೋರಿದ್ದಾರೆ.
ರೈಲು ನಿಲುಗಡೆಗೊಳಿಸುವಂತೆ ಕುಂದಾಪುರದ ಸಾರ್ವಜನಿಕರು ಮನವಿ ಮಾಡಿದ್ದು, ಮನವಿಗೆ ಸ್ಪಂದಿಸಿದ ಕರಂದ್ಲಾಜೆ ಅವರು ಕೇಂದ್ರೀಯ ರಾಜ್ಯ ರೈಲ್ವೇ ಮಂತ್ರಿ ದರ್ಶನ್ ವಿಕ್ರಮ ಜ್ಜಾರದೋಷ್ ಅವರಿಗೂ ಕೂಡಾ ಸಾರ್ವಜನಿಕರ ಹಿತಕ್ಕಾಗಿ ಕೋಚಿವೆಲ್ ಎಲ್ ಟಿ ಟಿ ಎಕ್ಸ್ಪ್ರೆಸ್ ನಿಲುಗಡೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಕೋರಿದ್ದರು.
Advertisement. Scroll to continue reading.

ರೈಲು ನಿಲುಗಡೆಗೊಳಿಸುವುದರಿಂದ ನೂರಾರು ಪ್ರವಾಸಿಗರಿಗೆ, ತೀರ್ಥಯಾತ್ರಿಕರಿಗೆ, ವ್ಯಾಪಾರ-ವಹಿವಾಟು ನಡೆಸುವವರಿಗೆ ಅನುಕೂಲಕರವಾಗಲಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

In this article:Diksoochi news, diksoochi Tv, diksoochiudupi, konkan train, Kundapura
Click to comment

































