ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಶಿವಪುರದ ಕುಂದಾರುವಿನ ಶಿವ ದುರ್ಗೆ ಸಂಜೀವಿನಿ ಸಂಘದ ಮಹಿಳೆಯರು 25 ವರ್ಷಗಳಿಂದ ಮಾಡುತ್ತಿರುವ ಹಡಿಲು ಬಿದ್ದ 10 ಎಕ್ರೆ ಕೃಷಿ ಭೂಮಿಯ ಸುಗ್ಗಿ ನಾಟಿ ಕಾರ್ಯಕ್ಕೆ ಶುಕ್ರವಾರ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ .ನವೀನ್ ಭಟ್ ವೈ ನಾಟಿ ಮಾಡುವ ಮೂಲಕ ಚಾಲನೆ ನೀಡಿದರು.

ಹೆಬ್ರಿ ತಾಲೂಕು ಕಾರ್ಯನಿರ್ವಾಹಕಾಧಿಕಾರಿ ಶಶಿಧರ್ , ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಕೆಂಪೇಗೌಡ, ಜಿಲ್ಲಾ ಪಂಚಾಯತ್ ಸಹಾಯಕ ಯೋಜನಾಧಿಕಾರಿ ಜೇಮ್ಸ್ ಡಿಸಿಲ್ವಾ, ಶಿವಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ್ ಶೆಟ್ಟಿ ಪಿಡಿಒ ಸುರೇಖಾ, ಕಾರ್ಯದರ್ಶಿ ಅಶೋಕ್ , ಹೆಬ್ರಿ ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ರಮೇಶ್ ಕುಮಾರ್, ಎನ್ .ಆರ್ .ಎಲ್ .ಎಂ .ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ ಆಚಾರ್, ಜಿಲ್ಲಾ ವ್ಯವಸ್ಥಾಪಕಿ ನವ್ಯಾ , ವೈ .ಪಿ .ಜಯಮಾಲಾ, ಹಡಿಲು ಭೂಮಿ ಕೃಷಿ ನಿರತ ಸಂಜೀವಿನಿ ಸಂಘದ ಅಧ್ಯಕ್ಷೆ ಸುಗಂಧಿ ಮತ್ತಿತರರು ಹಾಜರಿದ್ದರು.

Advertisement. Scroll to continue reading.



































