ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬಾರಕೂರು ಧರ್ಮಶಾಲೆ ಶ್ರೀ ಮಾಸ್ತಿ ಅಮ್ಮನವರ ದೇವಸ್ಥಾನದ ವಾರ್ಷಿಕೋತ್ಸವದ ಪ್ರಯುಕ್ತ ಬ್ರಹ್ಮಾವರ ತಾಲೂಕು ಪೈಂಟಿಂಗ್ ಅಸೋಸಿಯೇಷನ್ ಗೌರವಾಧ್ಯಕ್ಷ ಗಣೇಶ್ ಗಾಣಿಗ ಮಾಸ್ತಿನಗರ ಮತ್ತು ಬಳಗದವರಿಂದ 16 ನೇ ವರ್ಷದ ಉಚಿತ ಪೈಂಟಿಂಗ್ ಜರಗಿತು.
ಇದೇ ಸಂದರ್ಭದಲ್ಲಿ ಶ್ರೀ ಸಿದ್ಧಿವಿನಾಯಕ ಹೋಲೋ ಬ್ರಿಕ್ಸ್ ರಂಗನಕೇರಿ ಮಾಲಕ ಹರೀಶ್ ನೇತೃತ್ವದಲ್ಲಿ ದೇವಸ್ಥಾನದ ಸುತ್ತು ಪ್ರದಕ್ಷಿಣಾ ಪಥಕ್ಕೆ ಉಚಿತ ಇಂಟರ್ ಲಾಕ್ ಅಳವಡಿಸಲಾಯಿತು. ದೇವಸ್ಥಾನದ ಅರ್ಚಕ ಅನಂತಪದ್ಮನಾಭ ಹಾಗೂ ಆಡಳಿತ ಸಮಿತಿಯ ಸುರೇಶ್ ಸುಭಾನು ಉಪಸ್ಥಿತರಿದ್ದರು.
Advertisement. Scroll to continue reading.