ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಚಾಂತಾರು ದೇವುಬೈಲ್ ನ ಸಂತೋಷ ಶೆಟ್ಟಿ ಮತ್ತು ಡಾ.ಜಗದೀಶ್ ಶೆಟ್ಟಿ ಅವರ ಮನೆಯ ವಠಾರದಲ್ಲಿ ಗುರುವಾರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ರಾಜ್ಯೋತ್ಸವ ಪ್ರಶಸ್ತೀ ಪುರಸ್ಕೃತ ಬನ್ನಂಜೆ ಬಾಬು ಅಮೀನ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಅವರು ಮಾತನಾಡಿ, ಜಾನಪದ ನಾಡಿನ ತುಳುನಾಡು ಇದೀಗ ಮೂಲ ಸಂಸ್ಕೃತಿಯನ್ನು ಮರೆಯುವ ಹಂತ ತಲುಪುತ್ತಿದೆ. ದೈವ ದೇವರುಗಳ, ನಾಗಸ್ಥಾನ, ಭೂತ ಸ್ಥಾನಗಳ ಎಲ್ಲಾ ನಂಬಿಕೆ ಆಚರಣೆಯನ್ನು ಯುವ ಜನತೆ ಮುನ್ನಡೆಸುವಂತ ಕಾರ್ಯಕ್ಕೆ ಮನೆಯ ಹಿರಿಯರು ಮಾರ್ಗದರ್ಶನ ಮಾಡಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಬಿಲ್ಲಾಡಿಯ ತಾಂತ್ರಿಕ ಶಿಕ್ಷಣ ಸಂಸ್ಥೆಗೆ ಆರ್ಥಿಕ ನೆರವನ್ನು ಸಂಸ್ಥೆಯ ಶಿವರಾಮ ಬನ್ನಂಜೆ ಅವರ ಮೂಲಕ ನೀಡಲಾಯಿತು.


ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ , ಬ್ರಹ್ಮಾವರ ಬಂಟರ ಸಂಘದ ಅಧ್ಯಕ್ಷ ರಾಜಾರಾಂ ಶೆಟ್ಟಿ , ಅಜಪುರ ಕನ್ನಡ ಸಂಘದ ಅಧ್ಯಕ್ಷ ನಿತ್ಯಾನಂದ ಶೆಟ್ಟಿ , ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.



































