ವರದಿ : ದಿನೇಶ್ ರಾಯಪ್ಪನಮಠ
ಕೋಟ : ಕುಂದಾಪುರದ ಕಡೆಯಿಂದ ಮಂಗಳೂರಿಗೆ ಸಾಗುತ್ತಿದ್ದ ಲಾರಿಯೊಂದು ಶುಕ್ರವಾರ ಬೆಳಗಿನ ಜಾವ 4.30 ರ ವೇಳೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ಕೋಟ ಮೂರುಕೈ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಚಾಲಕ ಮತ್ತು ನಿರ್ವಾಹಕರು ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ.
ಲಾರಿ ಪಂಜಾಬ್ ನಿಂದ ಲ್ಯಾಮಿನೇಟೆಡ್ ಸನ್ ಮೈಕ್ ಶೀಟುಗಳನ್ನು ತುಂಬಿಕೊಂಡು ಮಂಗಳೂರಿಗೆ ಸಾಗಿಸುತ್ತಿತ್ತು ಎನ್ನಲಾಗಿದೆ. ಮೂರುಕೈ ಬಳಿ ಬರುವಾಗ ಲಾರಿಯ ಬ್ರೇಕ್ ವಿಫಲಗೊಂಡು ಈ ದುರಂತ ಸಂಭವಿಸಿದೆ.
Advertisement. Scroll to continue reading.


ರಸ್ತೆಯಿಂದ ಬದಿಗೆ ಸರಿದ ಲಾರಿ ವಿದ್ಯುತ್ ಕಂಬ ಹಾಗೂ ಒಂದೆರಡು ತೆಂಗಿನಮರಗಳಿಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ಗಾಯಾಳುಗಳು ಚಿಕಿತ್ಸೆಯ ನಂತರ ಚೇತರಿಸಿಕೊಂಡಿದ್ದಾರೆ. ಕೋಟ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
In this article:accident, Diksoochi news, diksoochi udupi, diksoochitv, kota, moorukay
Click to comment

































