ಕುಂದಾಪುರ : ರಂಜಿತ್.ಎಸ್.ಹೆಂಗವಳ್ಳಿ ಹನಿಟ್ರಾಪ್ ನಡೆಸಿ ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ವ್ಯಕ್ತಿಯೊಬ್ಬರು ಶಂಕರನಾರಾಯಣ ಠಾಣೆಗೆ ನೀಡಿದ ದೂರಿನನ್ವಯ ಪೋಲಿಸರು ಪ್ರಕರಣ ದಾಖಲಿಸಿಕೊಂಡು ರಂಜಿತ್.ಎಸ್.ಹೆಂಗವಳ್ಳಿಯನ್ನು ಬಂಧಿಸಿದ್ದಾರೆ.
ತಾನು ಪ್ರಭಾವಿ ರಾಜಕಾರಣಿಗಳ ಆಪ್ತ ಎಂದು ಹೇಳಿಕೊಂಡು ತಿರುಗುತ್ತಿದ್ದ ಈತ ಯುವತಿಯ ಮೂಲಕ ರಾತ್ರಿ ಹೊತ್ತು ಶ್ರೀಮಂತರಿಗೆ, ರಾಜಕೀಯ ಮುಖಂಡರಿಗೆ ಕರೆ ಮಾಡಿಸಿ ಅಶ್ಲೀವಾಗಿ ಮಾತನಾಡಿಸುತ್ತಿದ್ದನು. ನಂತರ ಯುವತಿಯ ಬೆತ್ತಲೆ ಪೋಟೋವನ್ನು ಅವರಿಗೆ ಕಳುಹಿಸಿ ಅವರ ಬೆತ್ತಲೆ ಪೋಟೊವನ್ನು ಯುವತಿಗೆ ಕಳುಹಿಸುವಂತೆ ಮಾಡುತ್ತಿದ್ದನು. ನಂತರ ಯುವತಿಗೆ ಬಂದ ಬೆತ್ತಲೆ ಪೋಟೊ ದ ಸ್ಕ್ರೀನ್ ಶಾಟ್ ತೆಗೆದು ಹಣ ಸುಲಿಗೆ ಮಾಡುತ್ತಿದ್ದ ಎನ್ನಲಾಗಿದೆ.
ವ್ಯಾಟ್ಸಾಪ್ ನಲ್ಲಿ ಬೆದರಿಕೆ

ಹನಿಟ್ರಾಪ್ ಮಾಡಿಸಿ ನಂತರ ಅದೇ ಪೋಟೊವನ್ನು ಅವರ ವ್ಯಾಟ್ಸಾಪ್ ಗೆ ಕಳುಹಿಸಿ ಹಣಕ್ಕೆ ಆಮಿಷ ಒಡ್ಡುವುದಲ್ಲದೇ, ನಿಮ್ಮ ಸ್ನೇಹಿತರಿಗೆ ಹಾಗು ಕುಟುಂಬಸ್ಥರಿಗೆ ಈ ಪೋಟೊವನ್ನು ಕಳುಹಿಸುತ್ತೇನೆ, ಕೇಸು ದಾಖಲಿಸುತ್ತೇನೆ ಎಂದು ಬೆದರಿಸುತ್ತಿದ್ದನು. ಅಲ್ಲದೇ ೨೦ ರಿಂದ ೨೫ ಲಕ್ಷ ರೂ ಬೇಡಿಕೆ ಇಡುತ್ತಿದ್ದ ಎಂದು ತನಿಖೆಯಿಂದ ಬಯಲಾಗಿದೆ. ಅಲ್ಲದೇ ಈತ ಅನೇಕರಿಗೆ ಈ ರೀತಿ ಹನಿಟ್ರಾಪ್ ಮಾಡಿರುವ ಸಾಧ್ಯತೆ ಇದ್ದು ತನಿಖೆ ನಡೆಸುತ್ತಿದ್ದೇವೆ ಎನ್ನುತ್ತಾರೆ ಪೋಲಿಸ್ ಅಧಿಕಾರಿಗಳು
ಪೋಕ್ಸೊ ಪ್ರಕರಣದ ಆರೋಪಿ
೨೦೧೬ ರಲ್ಲಿ ಈ ರಂಜಿತ್.ಎಸ್.ಹೆಂಗವಳ್ಳಿ ಎಂಬಾತ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಯಾಗಿದ್ದು, ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ


































