ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಕ್ರಿಸ್ ಮಸ್ ಹಬ್ಬದ ಅಂಗವಾಗಿ ಬಾರಕೂರು ಬಳಿಯ ಕೂರಾಡಿ ಸೈಂಟ್ ಪೀಟರ್ ಮತ್ತು ಪಾವ್ಲ್ ಚರ್ಚ್ ನಲ್ಲಿ ಶುಕ್ರವಾರ ರಾತ್ರಿ ರೆವರೆಂಡ್ ಫಾದರ್ ಲಾರೇನ್ಸ್ ಡಿ’ಸೋಜ ವಿಶೇಷ ಪೂಜೆ ನೆರವೇರಿಸಿದರು.

ಕ್ರಿಸ್ ಮಸ್ ಹಬ್ಬಕ್ಕೆ ಏಸುವಿನ ಜನನದ ಸಂಕೇತಕ್ಕೆ ಗೋದಲಿಯ ಚಿತ್ರಣವನ್ನು ಬಹುತೇಕ ಕಡೆಯಲ್ಲಿ ಕಂಡರೆ ಭಾರತೀಯ ಓರ್ಥೋ ಡೆಕ್ಸ್ ಸಿರಿಯನ್ ಚರ್ಚ ಗಳಲ್ಲಿ ಮಾತ್ರ ಕಂಡು ಬರುವ ಅತೀ ವಿರಳವಾಗಿರುವ ಕೆಂಡ ಸೇವೆಯಂತಹ ಕ್ರಮ ಕೂಡಾ ಇದೆ.

ಶಿಲುಬೆಯ ಮಾದರಿಯಲ್ಲಿ ನೆಲವನ್ನು ಅಗೆದು ಅದರಲ್ಲಿ ಬೆಂಕಿ ಹಾಕಿ ಕೆಂಡವಾದ ಬಳಿಕ ಸುತ್ತಲೂ ನಿಂತು ಮೊಂಬತ್ತಿ ಹಚ್ಚಿ ಪ್ರಾರ್ಥಿಸುವುದು. ಇದು ಏಸುವಿನ ಜನನ ವಾದ ಬಳಿಕ ದೇವದೂತರು ಸ್ವರ್ಗದಿಂದ ಭೂಮಿಗೆ ಸುವಾರ್ತೆಯನ್ನು ಹೇಳಲು ಬಂದಾಗ ಮೊದಲು ಕಂಡು ಬಂದವರು ಬೆಂಕಿಯಲ್ಲಿ ಚಳಿಕಾಯುವ ಕುರಿ ಕಾಯುವ ಜನರು.
ಇದರ ಕಲ್ಪನೆಯಲ್ಲಿ ಬೆಂಕಿ ಮತ್ತು ಅದಕ್ಕೆ ದೂಪವನ್ನು ಹಾಕಿ ಪರಿಮಳವನ್ನು ಮತ್ತು ಬೆಳಕನ್ನು ಹೊಸ ಯುಗದ ಪರಿಕಲ್ಪನೆಯಲ್ಲಿ ಪಸರಿಸಲಾಗುತ್ತದೆ .ಇದು ಭಾರತೀಯ ಓರ್ಥೋ ಡೆಕ್ಸ್ ಸಿರಿಯನ್ ಸಭೆಯಲ್ಲಿ ಮಾತ್ರ ಆಚರಣೆಯಲ್ಲಿದೆ.

ಕೊಳಲಗಿರಿ ಸೈಂಟ್ ಅಂತೋನಿ ಚರ್ಚ್ ನಲ್ಲಿ ಫಾಧರ್ ಡೆವಿಡ್ ಕ್ರಾಸ್ತಾ ಸೇರಿದಂತೆ ಪುರಾತನ ಸಂಪ್ರದಾಯದ ಪ್ರಾರ್ಥನಾ ಕೇಂದ್ರದಲ್ಲಿ ಮಾತ್ರ ಈ ಆಚರಣೆ ಇದೆ. ಈ ಸಂದರ್ಭ ಅನೇಕ ಕ್ರೈಸ್ತ ಬಾಂಧವರು ಭಾಗವಹಿಸಿದ್ದರು.



































