ವರದಿ : ದಿನೇಶ್ ರಾಯಪ್ಪನಮಠ
ಕೋಟ: ಈ ಹಿಂದೆ ಸ್ವ ಪಕ್ಷದ ದಲಿತ ಶಾಸಕರಾದ ಅಖಂಡ ಶ್ರೀನಿವಾಸ ಅವರ ಮನೆ ಮೇಲೆ ತಮ್ಮದೇ ಬೆಂಬಲಿಗರು ಹಾಗು ಸ್ವ-ಪಕ್ಷದ ಮುಖಂಡರು ಕಾರ್ಯಕರ್ತರೆಲ್ಲ ಗುಂಪಾಗಿ ಹೋಗಿ ದೌರ್ಜನ್ಯ ಹಿಂಸೆ ಮಾಡಿ ಮನೆಗೆ ಆಸ್ತಿ-ಪಾಸ್ತಿಗೆ ಬೆಂಕಿ ಇಟ್ಟಾಗ ಅವರ ನೆಮ್ಮದಿಗೆ ಬೆಂಕಿ ಕೊಳ್ಳಿ ಇಟ್ಟಾಗ ಇಲ್ಲದ ಕಾಳಜಿ ಈಗ ರಾಜಕೀಯ ಚದುರಂಗದಾಟಕ್ಕೆ ದಾಳವಾಗಿ ಬಳಸಿಕೊಳ್ಳುತ್ತಿರುವುದು ಹೇಯ ನಡವಳಿಕೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೊರ್ಚಾದ ರಾಜ್ಯ ಕಾರ್ಯದರ್ಶಿ ಐರೋಡಿ ವಿಠ್ಠಲ ಪೂಜಾರಿ ಹೇಳಿದ್ದಾರೆ.
ಭಾರತೀಯ ಜನತಾ ಪಾರ್ಟಿಯು ಅಂದು ಇಂದು ಮುಂದು ಸೂರ್ಯ ಚಂದ್ರ ಇರುವ ತನಕ ಹಿಂದುತ್ವದ ಹಾಗು ಹಿಂದುಗಳ ಪರ ಜೊತೆಗೆ ಸನಾತನ ಧರ್ಮದ ಯಾವುದೇ ಪಂಗಡ ಸಮುದಾಯದವರ ವಿರುದ್ಧ ಯಾರೇ ಎಷ್ಟೆ ಪ್ರಭಾವಿಗಳು ದೌರ್ಜನ್ಯ ಎಸಗಲು ಬಂದರು ; ಎಸಗಿದರು ಭಾಜಪದವರಾದ ನಾವು ಖಂಡತುಂಡವಾಗಿ ಖಂಡಿಸುತ್ತೇವೆ!

ತಪ್ಪು ಮಾಡಿದ ಯಾವುದೇ ವ್ಯಕ್ತಿಯನ್ನಾಗಲಿ ಅಧಿಕಾರಿಯನ್ನಾಗಲಿ ರಕ್ಷಣೆ ಮಾಡುವ ದರ್ದು ನಮಗಿಲ್ಲ!
ಈ ನೆಲದ ಕಾನೂನನ್ನು ಗೌರವಿಸುವ ನಾವು ಅಪರಾಧ ಮಾಡಿದವರಿಗೆ ಕಾನೂನಿನ ಚೌಕಟ್ಟಿನಲ್ಲಿ ಶಿಕ್ಷೆಯಾಗಿ ; ದೌರ್ಜನ್ಯ ಹಿಂಸೆಯಿಂದ ನೊಂದವರಿಗೆ ನ್ಯಾಯ ಸಿಗಬೇಕು ಎನ್ನುವುದು ನಮ್ಮ ಪ್ರಪ್ರಥಮ ಆದ್ಯತೆ ಹಾಗು ಬದ್ಧತೆ ಕೂಡ ಹೌದು!
ಹಾಗಾಗಿ ಸನಾತನ ಹಿಂದು ವಿರೋಧಿ ಸಿದ್ದರಾಮಯ್ಯನವರ ನೀತಿ ಪಾಠ – ಬೊಧನೆ ಅವಶ್ಯಕತೆ ನಮಗಿಲ್ಲ ನಮ್ಮ ಭಾಜಪ ಪಕ್ಷಕ್ಕೂ ಇಲ್ಲ ಎಂದು ಅವರು ತಿಳಿಸಿದ್ದಾರೆ.

































