ಉಡುಪಿ: ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ (ರಿ) ಮತ್ತು ಮಣಿಪಾಲ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಮಣಿಪಾಲ ಸಿಗ್ನಾ ಆರೋಗ್ಯ ಸುರಕ್ಷಾ ಕಾರ್ಡ್ ವಿತರಣೆ ಹಾಗೂ ವಿಪ್ರ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಶ್ರೀ ಬ್ರಾಹ್ಮೀ ಸಭಾ ಭವನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಈ ಬಾರಿಯ ಪರ್ಯಾಯ ಪೀಠಾಧೀಶರಾದ ಕೃಷ್ಣಾಪುರ ಮಠದ ಶ್ರೀ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರನ್ನು ಸಭಾದ ಅಧ್ಯಕ್ಷ ಎಂ. ಜಿ. ಚೈತನ್ಯ ದಂಪತಿ ಫಲ ಪುಷ್ಪ ಮಾಣಿಕ್ಯ ಮಂಗಳಾರತಿ ಎತ್ತಿ ಪಾದಪೂಜೆಯನ್ನು ನೇರವೇರಿಸಲಾಯಿತು. ನಂತರ ಅನುಗ್ರಹ ಸಂದೇಶಗೈದ ಮಠಾಧೀಶರು ಪರ್ಯಾಯ ಮಹೋತ್ಸವದಲ್ಲಿ ಸಾಂಗವಾಗಿ ತೊಡಗಿಕೊಳ್ಳಲು ವಿನಂತಿಸಿದರು.

ಈ ವೇಳೆ ಉಡುಪಿಯ ಸುತ್ತಮುತ್ತಲಿನ ಸುಮಾರು 450 ವಿಪ್ರ ಕುಟುಂಬಕ್ಕೆ ಆರೋಗ್ಯ ಕಾರ್ಡ್ ವಿತರಿಸಲಾಯಿತು. ಕೋವಿಡ್ ಮಹಾಮಾರಿಗೆ ಸಡ್ಡು ಹೊಡೆದು ತಾಯಿ ಮಗು ಹಾಗೂ ಹಲವು ಜೀವಗಳನ್ನು ಉಳಿಸಿದ ಡಾ| ಟಿ.ಎಂ.ಎ. ಪೈ ಆಸ್ಪತ್ರೆಯ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಡಾ ಶಶಿಕಲಾ ಭಟ್ , ಹಲವಾರು ನಾಟಕ, ಚಲನಚಿತ್ರಗಳಲ್ಲಿ ಅಭಿನಯಿಸಿದ ನಟ, ನಿರ್ದೇಶಕ , ಸಂಘಟಕ ಹಾಗೂ ನಾಯಕ ರಂಗಭೂಮಿ ಕಲಾವಿದ ರವಿರಾಜ್ ಎಚ್.ಪಿ, ಅಪರ ಕ್ರಿಯೆ ಮುಂತಾದ ಸಾಮಾಜಿಕ ಕಳಕಳಿಯ ಸೇವೆಯನ್ನು ಮಾಡುತ್ತಿರುವ ರಾಮ ಕೊಡಂಚ, ಹಾಗೂ ಅಚ್ಚುಕಟ್ಟು, ಶಿಸ್ತು ಸಂಯಮ ಭಕ್ತಿಶ್ರದ್ಧೆಯ ಧಾರ್ಮಿಕ ಸೇವೆಯ ಸಾಕಾರಮೂರ್ತಿ ರಮೇಶ್ ಭಟ್ ರನ್ನು ಸನ್ಮಾನಿಸಲಾಯಿತು.

ಕೋವಿಡ್ ಕಾರಣದಿಂದ ತಾಯಿಯನ್ನು ಕಳೆದುಕೊಂಡ ಸಂತ್ರಸ್ತೆ ಅಮೃತಾಗೆ ಆರ್ಥಿಕ ನೆರವು, ಆರೋಗ್ಯ ಕಾರ್ಡ್ ವಿತರಣೆಯ ಸಂದರ್ಭದಲ್ಲಿ ಶ್ರಮಿಸಿದ ಸಂಚಾಲಕ ರಘುಪತಿ ರಾವ್ ಹಾಗೂ ಇತರ ಸದಸ್ಯರನ್ನು ಗುರುತಿಸಲಾಯಿತು.
ಈ ಸಂದರ್ಭ ಅಂಬಲಪಾಡಿ ಶ್ರೀ ಜನಾರ್ಧನ ಮಹಾಕಾಳಿ ದೇವಳದ ಧರ್ಮದರ್ಶಿ ಡಾ| ನಿ.ಬೀ. ವಿಜಯ ಬಲ್ಲಾಳ್, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮಕ್ಕಳ ಚಿಕಿತ್ಸಾ ವಿಭಾಗದ ತಜ್ಞ ಪ್ರಾಧ್ಯಾಪಕ ಡಾ| ಸುನಿಲ್ ಸಿ. ಮುಂಡ್ಕೂರು,
ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ, ಉಪಾಧ್ಯಕ್ಷ ರಘುಪತಿ ರಾವ್, ರಾಜೇಶ್ ನಾವಡ, ಮೋಹನ್ ದಾಸ್ ಭಟ್, ರಂಜನ್ ಕಲ್ಕೂರ್, ಸುಮಿತ್ರಾ ಕೆರೆಮಠ, ಸುನೀತಾ ಮೊದಲಾವರು ಉಪಸ್ಥಿತರಿದ್ದರು.

ಅಧ್ಯಕ್ಷ ಚೈತನ್ಯ ಎಂ.ಜಿ. ಸ್ವಾಗತಿಸಿದರು. ನಾರಾಯಣ ದಾಸ ಉಡುಪ ವಂದಿಸಿದರು. ರಾಜೇಶ್ ಭಟ್ ಪಣಿಯಾಡಿ ನಿರೂಪಿಸಿದರು.

































