ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಅಂಬೇಡ್ಕರ್ ಯುವಕ ಮಂಡಲ ಬಿರ್ತಿಯಲ್ಲಿ ಸಾವಿತ್ರಿ ಬಾಯಿ ಪುಲೇ ಅವರ ಜನ್ಮದಿನವನ್ನು ಸಾವಿತ್ರಿ ಬಾಯಿ ಪುಲೇ ಗ್ರಂಥಾಲಯ ವನ್ನು ಸೋಮವಾರ ಪ್ರಗತಿಪರ ಹೋರಾಟಗಾರ ಜಿ.ರಾಜಶೇಖರ ಉದ್ಘಾಟಿಸಿದರು.
ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರಮೂರ್ತಿ ದಿಕ್ಸೂಚಿ ಭಾಷಣ ಮಾಡಿ ಸಾವಿತ್ರಿ ಬಾಯಿ ಪುಲೇಯವರು 191 ವರ್ಷದ ಹಿಂದೆ ಶೋಷಿತರಿಗೆ ಅಕ್ಷರಜ್ಞಾನವನ್ನು ನೀಡಿದವರು. ಸ್ವಾತಂತ್ರ್ಯ ಪೂರ್ವದಲ್ಲಿ ಸ್ವತಃ ಶಾಲೆಯನ್ನು ಆರಂಭ ಮಾಡಿ ಶೊಷಿತರು ಮಾತ್ರವಲ್ಲ ಎಲ್ಲಾ ವರ್ಗದ ಜನರೀಗೆ ಅಕ್ಷರವನ್ನು ತಿಳಿಸಿದವರು ಅವರ ನೆನಪನ್ನು ಭಾರತೀಯರೆಲ್ಲರೂ ಶಾಶ್ವತಗೊಳಿಸುವ ಕಾರ್ಯ ಮಾಡಬೇಕು ಎಂದರು.


ಶೈಕ್ಷಣಿಕವಾಗಿ ಮುಂದುವರಿದ ಕರಾವಳಿ ಜಿಲ್ಲೆ ಯಲ್ಲಿ ಮುಂದಿನ ದಿನದಲ್ಲಿ ಆಡಳಿತಾತ್ಮಕ ಪರೀಕ್ಷೆಯಲ್ಲಿ ಹೆಚ್ಚು ತೊಡಗಿಸಿಕೊಂಡು ಆಡಳಿತ ವ್ಯವಸ್ಥೆಗೆ ಮಹತ್ವಿಕೆ ನೀಡ ಬೇಕು ಆ ನಿಟ್ಟಿನಲ್ಲಿ ಬ್ರಹ್ಮಾವರದಲ್ಲಿ ಸಮಾನ ಮನಸ್ಕರೊಂದಿಗೆ ಚರ್ಚಿಸಿ ಯುವಜನತೆಯನ್ನು ಸಿದ್ಧಗೊಳಿಸುವ ಯೋಜನೆ ಮಾಡಲಾಗುವುದು ಎಂದರು.

ಚಿಂತಕ ಫ್ರೋಫೆಸರ್ ಫಣಿರಾಜ್ , ಉದ್ಯಮಿ ಬಿರ್ತಿ ರಾಜೇಶ್ ಶೆಟ್ಟಿ ಕಾರ್ಮಿಕ ಇಲಾಖೆಯ ಅಧಿಕಾರಿ ಜೀವನ್ ಕುಮಾರ್ , ಸುಂದರ್ ಮಾಸ್ತರ್ ಉಪಸ್ಥಿತರಿದ್ದರು.

ಅಂಬೇಡ್ಕರ್ ಯುವಕ ಮಂಡಲದ ಶ್ಯಾಮರಾಜ್ ಬಿರ್ತಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.


































