ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಉತ್ತರಾಯಣ ಪುಣ್ಯಕಾಲವಾದ ಮಕರ ಮಾಸವು ಕಳೆದ 3 ವರ್ಷ ದಿಂದ ನಾನಾ ದೇವಸ್ಥಾನಗಳ ಜಾತ್ರೆ ಉತ್ಸವಗಳು ನಿಂತಿದೆ. ಆದರೆ ಕೆಲವೊಂದು ಆಚರಣೆಗಳು ಕೆಲವು ದೇವಸ್ಥಾನದಲ್ಲಿ ಮಾತ್ರ ನಿಲ್ಲಿಸಲೇ ಬಾರದು ಎಂಬ ನಂಬಿಕೆ ಇದೆ.
ನೀಲಾವರ ಶ್ರೀ ಮಹಿಷ ಮರ್ಧಿನೀ ದೇವಸ್ಥಾನದಲ್ಲಿ ಭಾನುವಾರ ರಥೋತ್ಸವ ನಿಗದಿಯಾಗಿತ್ತು. ಆದರೆ, ಕೋವಿಡ್ ಮಾರ್ಗಸೂಚಿಯಲ್ಲಿ ರಥೋತ್ಸವದ ಪೂರ್ವ ಬಾವಿ ಆಚರಣೆಗಳು ಶುಕ್ರವಾರವೇ ನಡೆದಿದೆ.

ಪುರಾತನದಿಂದ ಪರಂಪರಾಗತವಾಗಿ ನೀಲಾವರ ದೇವಸ್ಥಾನದಲ್ಲಿ ಮಾತ್ರ ಸಂಪೂರ್ಣವಾಗಿ ಕಾಣುವ ಸಾಮವೇದದ ಪಾರಾಯಣ ಆಚರಣೆ ಶುಕ್ರವಾರ ನಡೆಯಿತು.
ನಿರಂತರವಾಗಿ 24 ಗಂಟೆಗಳ ಪಾರಾಯಣವನ್ನು 8 ಅಷ್ಠಕದಲ್ಲಿ 8 ಮಂದಿಯಿಂದ 3 ಗಂಟೆಯ ಅವಧಿಯಲ್ಲಿ ಸಾಮವೇದ ಪಾರಾಯಣ ನಡೆದಿದೆ.
ಋಗ್ವೇದ ಮತ್ತು ಯಜುರ್ವೇದಕ್ಕಿಂತ ಭಿನ್ನವಾಗಿ ಸಂಗೀತಮೂಲದ ಸಾಮವೇದವನ್ನು ಅಭ್ಯಾಸ ಮಾಡುವವರು ಮತ್ತು ಕಲಿಯುವವರು ತೀರಾ ವಿರಣವಾಗಿದ್ದು ನೀಲಾವರದ ನಾಗರಾಜ ಮಕ್ಕಿತ್ತಾಯ ಮತ್ತು ಮಹಾಭಲೇಶ್ವರ ತುಂಬು ಕೆದಿಲಾಯ ಇನ್ನಿತರರಿಂದ ನಡೆಯಿತು.


ವೇದಗಳಲ್ಲಿ ನಾಲ್ಕು ವೇದಗಳಿವೆ. ಅದರಲ್ಲಿ ಋಗ್ವೇದ ಮನುಷ್ಯನ ಶಿರೋಭಾಗ ಶಿರ, ಯಜುರ್ವೇದ ಜಠರ, ಸಾಮವೇದ ಹೃದಯ ಭಾಗ, ಅಥರ್ವವೇದ ಕವಚ ಭಾಗ. ಅದರಲ್ಲಿ ವಿಷೇಶವಾಗಿ ನೀಲಾವರ ದೇವಸ್ಥಾನವು ಸಾಮವೇದ ದೇವತೆಯಾಗಿ, ಹಲವು ಭಕ್ತರಿಗೆ ಕುಲದೇವತೆಯಾಗಿ ಇಲ್ಲಿ ನೆಲೆಸಿದ್ದಾಳೆ. ಇಲ್ಲಿ ಪ್ರತಿ ಉತ್ಸವದಲ್ಲಿ ಸಾಮವೇದ ಪಾರಾಯಣ ವಿಶೇಷವಾಗಿ ನಡೆಯುತ್ತದೆ.ರಮೇಶ್ ಭಟ್

































