ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಕೊರೋನಾ ಸೋಂಕು ರಾಜ್ಯಾದ್ಯಂತ ಆತಂಕ ಸೃಷ್ಟಿಸಿದೆ. ಎಲ್ಲಾ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಿಗೆ ಕೋವಿಡ್ ತಣ್ಣೀರೆರೆಚುತ್ತಿದೆ. ಈ ನಡುವೆ ಜ.14 ರಂದು ನಡೆವ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮವೂ ತಣ್ಣಗಾಗಲಿದೆ.
ಶ್ರೀಕ್ಷೇತ್ರ ಮಾರಣಕಟ್ಟೆ ಶ್ರೀಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಸಾಂಪ್ರದಾಯಿಕವಾಗಿ ಸರಳವಾಗಿ ಮಕರ ಸಂಕ್ರಮಣ ಉತ್ಸವವನ್ನು ಕೋವಿಡ್ 19 ನಿಯಮಾವಳಿಯನ್ನು ಪಾಲಿಸಿ ಜರುಗಿಸಲಾಗುವುದು. ಭಕ್ತಾದಿಗಳು 2 ಡೋಸ್ ಕೋವಿಡ್ ಲಸಿಕೆ ಪಡೆದಿರಬೇಕು ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸಿದವರಿಗೆ ಮಾತ್ರ ಬೆಳಿಗ್ಗೆ 8.30 ರಿಂದ ಸಂಜೆ 6 ಘಂಟೆಯ ವರೆಗೆ ದೇವಸ್ಥಾನದ ಒಳಗೆ ಪ್ರವೇಶ ನೀಡಲಾಗುವುದು. ಗೆಂಡ ಸೇವೆಗೆ ಸಾರ್ವಜನಿಕರಿಗೆ ಅವಕಾಶವಿರುವುದಿಲ್ಲ. ದಿನಾಂಕ 15 ಮತ್ತು 16 ರಂದು ವಾರಾಂತ್ಯ ಕರ್ಫ್ಯೂ ಇದ್ದಲ್ಲಿ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗುವುದು. ಯಾವುದೇ ಸೇವೆಗೆ ಅವಕಾಶ ಇರುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
Advertisement. Scroll to continue reading.

In this article:brahmalingeshwara temple, Diksoochi news, diksoochi Tv, diksoochi udupi, Maranakatte
Click to comment

































