ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ರಾಜ್ಯದಾದ್ಯಂತ ಅಂಗನವಾಡಿ ನೌಕರರು ಇಂದು ತಮ್ಮ ಬೇಡಿಕೆಗಳಿಗಾಗಿ ಹೋರಾಟ ಹಾಗೂ ಮನವಿ ಪತ್ರಗಳನ್ನು ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಸಲ್ಲಿಸಿದರು.
ಕುಂದಾಪುರ ಉಪ ತಹಶೀಲ್ದಾರರ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಕುಂದಾಪುರ ತಾಲೂಕು ಸಮಿತಿ ಸಿಐಟಿಯು ನೇತೃತ್ವದಲ್ಲಿ ಮನವಿ ನೀಡಲಾಯಿತು.
ಈ ವೇಳೆಯಲ್ಲಿ ಸಂಘದ ತಾಲೂಕು ಅಧ್ಯಕ್ಷೆ ಬಿ.ಆಶಾಲತಾ ಶೆಟ್ಟಿ,ತಾಲೂಕು ಕಾರ್ಯದರ್ಶಿ ಶಾಂತ, ಕೋಶಾಧಿಕಾರಿ ಭಾಗ್ಯ ಎಸ್, ಸಬಿತಾ ಶೆಟ್ಟಿ, ಸುಮ, ಮೇರಿ, ಅಕ್ಕಣಿ, ಪ್ರೇಮ ಇದ್ದರು. ಸಿಐಟಿಯು ತಾಲೂಕು ಸಂಚಾಲಕ ಎಚ್. ನರಸಿಂಹ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಇದ್ದರು.

ಬೇಡಿಕೆಗಳು :
1.ಅಂಗನವಾಡಿ ಕೇಂದ್ರಗಳನ್ನು ಪಾಲಾನ ಕೇಂದ್ರವಲ್ಲದೇ ಎಲ್. ಕೆ.ಜಿ, ಯುಕೆಜಿ ಶಿಕ್ಷಣ ನೀಡಿ ಮಕ್ಕಳನ್ನು ಆಕರ್ಷಿಸಬೇಕು.
2.ಕೇಂದ್ರದ ವೇಳಾಪಟ್ಟಿಯಲ್ಲಿ 3 ಗಂಟೆ ಶಾಲಾ ಪೂರ್ವ ಶಿಕ್ಷಣಕ್ಕೆ ಆದ್ಯತೆ ನೀಡಬೇಕು.
3 ಕೇಂದ್ರಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕು
4.ನೌಕರರನ್ನು ಐಸಿಡಿಎಸ್ ನ 5 ಉದ್ದೇಶಗಳಿಗೆ ಬಿಟ್ಟು ಉಳಿದ ಕೆಲಸ ನಿರ್ಬಂಧಿಸಿ ಶಾಲಾ ಪೂರ್ವ ಶಿಕ್ಷಣಕ್ಕೆ ಒತ್ತು ಕೊಡಬೇಕು.
5.ಹೊಸ ಶಿಕ್ಷಣ ನೀತಿಯ ಶಿಫಾರಸ್ಸಿನಲ್ಲಿರುವ 3 ರಿಂದ 8 ವರ್ಷದ ವರ್ಗೀಕರಣ ಕೈ ಬಿಡಬೇಕು.
6.ಮಹಿಳಾ ಮಕ್ಕಳ ಅಭಿವ್ರದ್ಧಿ ಇಲಾಖೆ ಶಿಫಾರಸ್ಸು ಮಾಡಿರುವ ರೂ.339.48 ಲಕ್ಷ ಅನದಾನ ಬಿಡುಗಡೆ ಮಾಡಬೇಕು.
7.ಕರೋನದಿಂದ ನಿಧನರಾದ ಕುಟುಂಬದವರಿಗೆ ಮಗಳು ಇಲ್ಲದಿದ್ದಾಗ ಸೊಸೆಗೆ ಹುದ್ದೆ ಕೊಡಬೇಕು.
8.ಕೋಳಿ ಮೊಟ್ಟೆಯನ್ನು ಆಹಾರ ಪದಾರ್ಥಗಳ ಜೊತೆ ಸರಬರಾಜು ಮಾಡಬೇಕು. ಇಲ್ಲದಿದ್ದಲ್ಲಿ ಜನವರಿಯಿಂದ ನೌಕರರ ಸ್ವಂತ ಹಣದಿಂದ ಮೊಟ್ಟೆ ವಿತರಿಸುತ್ತಿರುವುದನ್ನು ನಿಲ್ಲಿಸಲಾಗುವುದು.
9.ಕರೋನದಿಂದ ನಿಧನರಾದ ನೌಕರಿಗೆ ಕೂಡಲೇ ರೂ.30 ಲಕ್ಷ ಬಿಡುಗಡೆ ಮಾಡಬೇಕು.
10.ನೌಕರರಿಗೆ ಕನಿಷ್ಠ ವೇತನ,ಖಾಯಂ ಮಾಡಬೇಕು. ಪಿಂಚಣಿ ನೀಡಬೇಕು. ಅಲ್ಲಿವರೆಗೆ 26 ಸಾವಿರ ವೇತನ ನೀಡಬೇಕು.
11.ಖಾಲಿ ಇರುವ ಕಾರ್ಯಕರ್ತೆಯರ ಸಹಾಯಕಿಯರ ಹಾಗೂ ಇಲಾಖೆಗಳ ಹುದ್ದೆ ಭರ್ತಿ ಮಾಡಬೇಕು.
12.ಬಜೆಟ್ ನಲ್ಲಿ ಕಡಿತ ಮಾಡಿರುವ ರೂ.8452.38 ಕೋಟಿ ಹಣ ವಾಪಾಸ್ಸು ನೀಡಬೇಕು.
13.ಅಂಗನವಾಡಿ ಕೇಂದ್ರದಲ್ಲಿ ಕೊಲೆಯಾದ ತಿಪಟೂರಿನ ಸಹಾಯಕಿ ಭಾರತಿ ಕುಟುಂಬಕ್ಕೆ ವಿಶೇಷ ಪರಿಹಾರ ನೀಡಬೇಕು.
14.ಸರಕಾರ ಕ್ರಶ್ ತೆರೆಯಲು ಮುಂದಾಗಿದ್ದು ಇದನ್ನು ಅಂಗನವಾಡಿಯಿಂದ ಪ್ರತ್ಯೇಕವಾಗಿ ತೆರೆಯಬೇಕು ಎಂದು ಒತ್ತಾಯಿಸಿ ಮನವಿ ನೀಡಲಾಯಿತು.


































