ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಶಾಖೆಯು ಈ ಹಿಂದೆ ರಥಬೀದಿಯ ಮಹಡಿಯಲ್ಲಿದ್ದುದು ಇದೀಗ ಬಾರಕೂರು ಮುಖ್ಯ ರಸ್ತೆಯ ನೂತನ ಕಟ್ಟಡದ ನೆಲ ಅಂತಸ್ತಿಗೆ ಸೋಮವಾರ ಸ್ಥಳಾಂತರಗೊಂಡಿತು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಶಾಖೆಯನ್ನು ಉದ್ಘಾಟಿಸಿದರು.


ಬಳಿಕ ಮಾತನಾಡಿ, ದೇಶದ ಯಾವುದೇ ಭಾಗದಲ್ಲಿ ರೈತರು ಸಾಲ ಮಾಡಿ ಆತ್ಮಹತ್ಯೆ ಮಾಡಿಕೊಳ್ಳದೆ ಇರುವ ಒಂದೇ ಜಿಲ್ಲೆ ಅಂದರೆ ಅದು ಉಡುಪಿ ಜಿಲ್ಲೆ. ಕಾರಣ ಇಲ್ಲಿ ಸಹಕಾರಿ ರಂಗ ಸದೃಢವಾಗಿರುವುದೇ ಕಾರಣವಾಗಿದೆ.
ತೀರಾ ಕೆಳಮಟ್ಟದಲ್ಲಿದ್ದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇಂದು ಸಾಲ ನೀಡುವಿಕೆ ಮತ್ತು ಮರುಪಾವತಿಯಲ್ಲಿ ಕೂಡಾ ಮಾದರಿಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ರಾಜೇಂದ್ರ ಕುಮಾರ್ ರವರನ್ನು ಬಾರಕೂರು ಜನತೆಯ ಪರವಾಗಿ ರಾಜ್ಯೋತ್ಸವ ಪ್ರಶಸ್ತೀ ಪುರಸ್ಕೃತ ಬಾರಕೂರು ಶಾಂತಾರಾಮ ಶೆಟ್ಟಿಯವರು ಅವರ ತಂಡದವರು ಕಂಬಳದ ಸಮವಸ್ತ್ರದಲ್ಲಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಬಾರಕೂರು ಶಾಖೆಯ ವತಿಯಿಂದ ರಾಜೇಂದ್ರ ಕುಮಾರ್‍ರವರು ವಾಹನ ಸಾಲ, ಗೃಹ ಸಾಲ, ಹೊಸ ಗುಂಪುಗಳಿಗೆ ಚಾಲನೆ ನೀಡಿದರು.

ಹೊಸ ಕಟ್ಟಡ ಮಾಲಿಕರಾದ ಬಾರಕೂರು ಶಾಂತಾರಾಮ ಶೆಟ್ಟಿ , ಸುಚಿತ್ರ ಶಾಂತಾರಾಮ ಶೆಟ್ಟಿಯವರನ್ನು ಬ್ಯಾಂಕ್ ಪರವಾಗಿ ಅಭಿನಂದಿಸಲಾಯಿತು.
ಶಾಖಾ ವ್ಯವಸ್ಥಾಪಕ ಹಿರಿಯಣ್ಣ ಪೂಜಾರಿಯವರನ್ನು ಗೌರವಿಸಲಾಯಿತು.

ಐಕಳಬಾವಾ ದೇವಿ ಪ್ರಸಾದ್ ಶೆಟ್ಟಿ , ಇಂದ್ರಾಳಿ ಜಯಕರ ಶೆಟ್ಟಿ , ಬ್ಯಾಂಕ್‍ನ ಮುಖ್ಯ ಕಾರ್ಯ ನಿರ್ವಣಾಧಿಕಾರಿ ರವೀಂದ್ರ ಬಿ. ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ ಮತ್ತು ಇನ್ನಿತರ ನಿರ್ದೇಶಕರು ಮತ್ತು ಸ್ಥಳಿಯ ನಾನಾ ಭಾಗದ ಸಹಕಾರಿ ಸಂಘದ ಅಧ್ಯಕ್ಷರುಗಳು ಉಪಸ್ಥಿತರಿದ್ದರು.


































