ವರದಿ : ದಿನೇಶ್ ರಾಯಪ್ಪನಮಠ
ಕೋಟ: ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ 159ನೇ ಜಯಂತಿಯ ಪ್ರಯುಕ್ತ ಯುವ ಸಪ್ತಾಹವನ್ನು ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ಗಾಂವ್ಕರ್ ಉದ್ಘಾಟಿಸಿದರು.
ಇದರ ಭಾಗವಾಗಿ ವಿಶೇಷ ಉಪನ್ಯಾಸವನ್ನು ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರಶಾಂತ್.ಎನ್ ಸಹಾಯಕ ಪ್ರಾಧ್ಯಾಪಕ, ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ವಿವೇಕಾನಂದರು ಮೌಡ್ಯಗಳಿಂದ ಮುಕ್ತವಾದ ಸುಧಾರಿತ ಹಿಂದೂ ಧರ್ಮವನ್ನು ಪ್ರತಿಪಾದಿಸಿ ಸಾಂಸ್ಕøತಿಕ ವೈವಿದ್ಯತೆ ಮತ್ತು ಆಧ್ಯಾತ್ಮಿಕ ಶ್ರೇಷ್ಠತೆಯ ಭಾರತ, ವಿಶ್ವಭ್ರಾತೃತ್ವ ಮತ್ತು ಮಾನವತೆಯನ್ನು ಜಗತ್ತಿಗೆ ಹರಡುವಲ್ಲಿ ಮಾದರಿಯಾಗಬೇಕೆಂದು ಬಯಸಿದ್ದರು. ಸ್ತ್ರೀಪುರುಷ ಸಮಾನತೆಯ, ನಿರ್ಗತಿಕರನ್ನು ಮೇಲೆತ್ತುವ, ಯುವಶಕ್ತಿಯನ್ನು ಜಾಗೃತಗೊಳಿಸುವ, ವೈಜ್ಞಾನಿಕ-ವೈಚಾರಿಕತೆಯ ಹಾಗೂ ಸಾಮರಸ್ಯ-ಸಹಿಷ್ಣುತೆಯ ಅದರ ವೇದಾಂತ ತತ್ವಗಳು, ಪ್ರಾಚೀನ-ಆಧುನಿಕತೆಯ, ವಿಜ್ಞಾನ-ಆಧ್ಯಾತ್ಮಿಕ, ಪಾಶ್ಚಿಮಾತ್ಯ-ಪೌರತ್ವಗಳ ಧರ್ಮ ಮತ್ತು ವ್ಯವಹಾರಗಳ ಸಂಗಮ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನಿತ್ಯಾನಂದ. ವಿ ಗಾಂವ್ಕರವರು ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ನಾಗರಾಜ ವೈದ್ಯ. ಎಂ, ಇಕೋ ಸಂಚಾಲಕರಾದ ರವಿಪ್ರಸಾದ್.ಕೆ.ಜಿ, ರಾಷ್ರ್ಟೀಯ ಸೇವಾಯೋಜನೆಯ ಘಟಕ-1ರ ಅಧಿಕಾರಿಯಾದ ಡಾ.ಮುರುಳಿ.ಎನ್ ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾಯೋಜನೆಯ ಘಟಕ-2ರ ಅಧಿಕಾರಿಯಾದ ಅನಂತ್.ಸಿ.ಎಸ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.



































