ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಅಜಪುರ ಕರ್ನಾಟಕ ಸಂಘದಲ್ಲಿ ದಿವಂಗತ ಸದಾಶಿವ ರಾವ್ ಸಂಸ್ಮರಣಾ ಸಂಗೀತೋತ್ಸವ ಶುಕ್ರವಾರ ಸಂಜೆ ಉನ್ನತಿ ಸಭಾಂಗಣದಲ್ಲಿ ಜರುಗಿತು. ಈ ಸಂದರ್ಭ
ಸುಗಮ ಸಂಗೀತಗಾರ ಚಂದ್ರಶೇಖರ ಕೆದ್ಲಾಯರನ್ನು ಸಂಗೀತೋತ್ಸವದ ಅಂಗವಾಗಿ ಸನ್ಮಾನಿಸಲಾಯಿತು.
ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಕೆದ್ಲಾಯ, ಶಿಕ್ಷಕನಾಗಿದ್ದ ನನಗೆ ಸಂಗೀತದ ಅಭಿರುಚಿ ಹಿಡಿಸಿ ಸಾಧನೆ ಮಾಡಲು ಸ್ಪೂರ್ಥಿ ಸದಾಶಿವ ರಾವ್ ರವರು ಅವರ ಹೆಸರಿನಲ್ಲಿ ನೀಡುವ ಸನ್ಮಾನ ಅಜಪುರ ಕನ್ನಡ ಸಂಘದಲ್ಲಿ ಗುರುತಿಸಿಕೊಂಡ ನನಗೆ ಅತೀ ಹೆಚ್ಚು ಸಾಧಿಸಲು ಹುರುಪು ತಂದಿದೆ ಎಂದರು.


ಇದೇ ಸಂದರ್ಭದಲ್ಲಿ ಗಾಯನ ಸ್ಪರ್ದೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.

ಅಜಪುರ ಕರ್ನಾಟಕ ಸಂಘದ ಅಧ್ಯಕ್ಷ ಎಚ್. ನಿತ್ಯಾನಂದ ಶೆಟ್ಟಿ , ಕಾರ್ಯದರ್ಶಿ ಮೋಹನ ಉಡುಪಿ, ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಬಳಿಕ ಕೆದ್ಲಾಯರ ಪುತ್ರಿಯರಾದ ಅಕ್ಷತಾ ಉಪಾಧ್ಯಾಯ ಮತ್ತು ಪಲ್ಲವಿ ತುಂಗ ಇವರಿಂದ ಸಂಗೀತ ಕಾರ್ಯಕ್ರಮ ಜರುಗಿತು.

ಮೃದಂಗದಲ್ಲಿ ಬಾಲಚಂದ್ರ ಭಾಗವತ್ ವಾಯಿಲಿನ್ ನಲ್ಲಿ ಶ್ರೀಧರ ಆಚಾರ್ಯ ಸಹಕರಿಸಿದ್ದರು


































