ವರದಿ : ಬಿ.ಎಸ್.ಆಚಾರ್ಯ
ಉಡುಪಿ: ಕೊಡಂಕೂರಿನಲ್ಲಿ 25 ವರ್ಷದ ಹಿಂದೆ ಸ್ಥಾಪನೆಗೊಂಡ ವಿಶ್ವ ಬ್ರಾಹ್ಮಣ ಸಂಸ್ಕೃತ ವಿದ್ಯಾಪೀಠದಲ್ಲಿ ಸ್ಥಾಪಕ ಅಲೆವೂರು ಪ್ರಭಾಕರ ಆಚಾರ್ಯ ಸಂಸ್ಮರಣೆ ಮತ್ತು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಗುರುವಾರ ವಿದ್ಯಾಪೀಠದಲ್ಲಿ ಜರುಗಿತು.

ಸ್ಥಾಪಕರ ಸಂಸ್ಮರಣೆ ಶಂಕರಪುರ ಶಿಲ್ಪಿ ಗಣಪತಿ ಆಚಾರ್ಯ ಮಾತನಾಡಿ, ಅಲೆವೂರು ಪ್ರಭಾಕರ ಆಚಾರ್ಯರು ವಿಶ್ವಕರ್ಮ ಸಮಾಜಕ್ಕೆ ಧಾರ್ಮಿಕ ಸಾಮಾಜಿಕ ಶೈಕ್ಷಣಿಕವಾಗಿ ದೂರದರ್ಶಿತ್ವದ ಚಿಂತನಕಾರರಾಗಿದ್ದರು. ಅವರು ಅಂದು ಮಾಡಲಾದ ವಿದ್ಯಾಪೀಠದಿಂದ ಶಿಕ್ಷಣ ಪಡೆದವರು ಇಂದು ಅನೇಕ ಕಡೆಯಲ್ಲಿ ವೈದಿಕರಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಆಗಿದೆ ಎಂದರು.

ಸಂಸ್ಥೆಯ ಪೋಷಕ ಅಧ್ಯಕ್ಷೆ ಶಶಿಕಲಾ ಪ್ರಭಾಕರ ಆಚಾರ್ಯ ವೈದಿಕ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಿದರು.

ವಿದ್ಯಾಪೀಠದ ಅಧ್ಯಕ್ಷ ಶ್ರೀಶ ಅಲೆವೂರು ನೆರವು ನೀಡಿದವರನ್ನು ಸ್ಮರಿಸಿದರು. ರಿಜಿಸ್ಟಾರ್ ಬಿ. ಎ . ಆಚಾರ್ಯ, ಕಾರ್ಕಳ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಧರ್ಮದರ್ಶಿ ರಾಮಚಂದ್ರ ಆಚಾರ್ಯ, ಪ್ರಾಂಶುಪಾಲ ಶ್ರೀಧರ್ ಭಟ್, ಸದಸ್ಯ ಅಲೆವೂರು ಯೋಗೀಶ ಆಚಾರ್ಯ, ಜಯರಾಮ ಆಚಾರ್ಯ ಸಾಲಿಗ್ರಾಮ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಶೇಖರ ಇನ್ನಿತರರು ಉಪಸ್ಥಿತರಿದ್ದರು.



































