ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ವಾಲಿಬಾಲ್ ಆಟಗಾರನೋರ್ವ ನೇಣಿಗೆ ಶರಣಾಗಿರುವ ಘಟನೆ ಕೆಳಪೇಟೆಯಲ್ಲಿ ನಡೆದಿದೆ.
ಹೆಬ್ರಿ ಕೆಳಪೇಟೆ ನಿವಾಸಿ ಪ್ರಶಾಂತ್ ಯಾನೆ ಪಚ್ಚು ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ವಾದ್ಯ ನುಡಿಸುವ ಕೆಲಸ ಮಾಡಿಕೊಂಡಿದ್ದು, ಜೊತೆಗೆ ಉತ್ತಮ ವಾಲಿಬಾಲ್ ಪಟು ಕೂಡಾ ಆಗಿದ್ದನು.
ಹೆಬ್ರಿ ಎಪಿಟಿ ಮತ್ತು ಎರ್ಲಪಾಡಿ ವಾಲಿಬಾಲ್ ತಂಡಗಳಲ್ಲಿ ಆಡುತ್ತಿದ್ದು, ಉತ್ತಮ ವಾಲಿಬಾಲ್ ಪೇಸರ್ ಆಗಿದ್ದ.
ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಶಾಂತ್, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎನ್ನಲಾಗಿದೆ.
Advertisement. Scroll to continue reading.
ಇದೇ ವಿಚಾರವಾಗಿ ಆತ ತನ್ನ ಚಿಕ್ಕಪ್ಪನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.