ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬಾರಕೂರು ರಂಗನಕೆರೆ ಕಂಬಿಗಾರ ಕೊಡ್ಲುವಿನಲ್ಲಿ ಭಗವಾನ್ ಶ್ರೀಬಬ್ಬು ಸ್ವಾಮಿ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠೆ ಬ್ರಹ್ಮ ಕಲಶಾಭಿಷೇಕ ಶುಕ್ರವಾರ ರಮೇಶ್ ಭಟ್ ನಾಯರ್ ಬೆಟ್ಟು ಇವರ ನೇತೃತ್ವದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ಜರುಗಿತು.

ಇದೇ ಸಂದರ್ಭದಲ್ಲಿ ಬಬ್ಬು ಸ್ವಾಮಿ ಮತ್ತು ಪರಿವಾರ ದೈವಗಳ ದರ್ಶನ ಸೇವೆ ಜರುಗಿತು.
ದೈವಗಳ ಗುಡಿ ನಿರ್ಮಾಣಕ್ಕೆ ಸ್ಥಳ ನೀಡಿದವರನ್ನು ಮತ್ತು ಪರಿವಾರ ದೈವಗಳ ಗುಡಿ ನಿರ್ಮಾಣಕ್ಕೆ ನೆರವಾದ ದಾನಿಗಳನ್ನು ಗೌರವಿಸಲಾಯಿತು.

ಜೀಣೋದ್ಧಾರ ಸಮಿತಿಯ ಅಧ್ಯಕ್ಷ ರತ್ನಾಕರ ಶೆಟ್ಟಿ, ಚಾಂಪಾಡಿ ಆಡಳಿತ ಮಂಡಳಿಯ ಅಧ್ಯಕ್ಷ ಹರೀಶ್ ಕೆ., ಪ್ರಧಾನ ಕಾರ್ಯದರ್ಶಿ ನಾರಾಯಣ ಕಂಬಿಗಾರ ಕೋಡ್ಲು , ಸಂಘಟನಾ ಕಾರ್ಯದರ್ಶಿ ಶರತ್ ರಾಜ್ ಕಂಬಿಗಾರ ಕೋಡ್ಲು , ಖಜಾಂಚಿ ರೋಹಿತಾಶ್ವ ಕಂಬಿಗಾರ ಕೋಡ್ಲು ಮತ್ತು ಸಮಿತಿಯ ಶ್ರೀನಿವಾಸ ಶೆಟ್ಟಿಗಾರ್ , ಗೋಪಾಲ್ ನಾಯ್ಕ್ , ಶ್ರೀನಿವಾಸ ಉಡುಪ ಕೂಡ್ಲಿ , ಗುರಿಕಾರರಾದ ರಾಮ , ವಾಸು ಮತ್ತು ಅರ್ಚಕರಾದ ಶೇಖರ , ಪ್ರಶಾಂತ್ ಇನ್ನಿತರು ಉಪಸ್ಥಿತರಿದ್ದರು.

ನಾನಾ ಭಾಗದ ಅನೇಕ ಭಕ್ತರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.





































