ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ನೀಟ್ ಸೂಪರ್ ಸ್ಪೆಷಾಲಿಟಿ ಪರೀಕ್ಷೆಯ ನ್ಯೂರೋ ಸರ್ಜರಿಯಲ್ಲಿ ಬಾರಕೂರಿನ ಯುವ ವೈದ್ಯ ಡಾ. ದಿನೇಶ್ ಭಂಡಾರ್ಕಾರ್ ಅವರು ದೇಶಕ್ಕೆ ೪ನೇ ರ್ಯಾಂಕ್ನ ಸಾಧನೆಗೈದಿದ್ದಾರೆ.
ಬ್ರಹ್ಮಾವರ ಲಿಟ್ಲ್ರಾಕ್ ಇಂಡಿಯನ್ ಸ್ಕೂಲ್ನಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ, ಉಡುಪಿ ವಿದ್ಯೋದಯದಲ್ಲಿ ಪ.ಪೂ,
ಮಂಗಳೂರು ಕೆ.ಎಂ.ಸಿ.ಯಲ್ಲಿ ಎಂಬಿಬಿಎಸ್ ಮುಗಿಸಿದ್ದರು.
Advertisement. Scroll to continue reading.

ಎಂ.ಎಸ್. ಜನರಲ್ ಸರ್ಜರಿಯನ್ನು ಬೆಂಗಳೂರು ಮೆಡಿಕಲ್
ಕಾಲೇಜು ಮತ್ತು ರೀಸರ್ಚ್ ಇನ್ಸಿಟ್ಯೂಟ್(ಬಿ.ಎಂ.ಸಿ.)ನಲ್ಲಿ ಪೂರ್ಣಗೊಳಿಸಿದ್ದು, ಪ್ರಸ್ತುತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ
ಸೀನಿಯರ್ ರೆಸಿಡೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಇವರು ಬಾರಕೂರಿನ ವೆಂಕಟರಮಣ ಭಂಡಾರ್ಕಾರ್ ಹಾಗೂ ಪೂರ್ಣಿಮಾ ಭಂಡಾರ್ಕಾರ್ ಅವರ ಪುತ್ರ.

ಡಾ.ದಿನೇಶ್ ಭಂಡಾರ್ಕರ್ ಸಾಧನೆಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement. Scroll to continue reading.

In this article:barkuru, Diksoochi news, diksoochi Tv, diksoochi udupi, Dinesh bandarkar
Click to comment

































