ಬ್ರಹ್ಮಾವರ : ಬಂಡೀಮಠ ತುಳಜಾ ಭವಾನಿ ಅಮ್ಮನವರ ಕಟ್ಟೆಯಲ್ಲಿ ಸತ್ಯನಾರಾಯಣ ಪೂಜೆ
Published
3
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ತುಳಜಾ ಭವಾನಿ ಅಮ್ಮನವರ ಕಟ್ಟೆ ಬಂಡೀಮಠ ಬಾರಕೂರು ಇಲ್ಲಿ ತುಳಜಾ ಭವಾನಿ ಮರಾಠಿ ಸಂಘ ಹಾಗೂ ಯುವ ವೇದಿಕೆ ಸಹಭಾಗಿತ್ವದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಭಾನುವಾರ ಸಂಜೆ ಜರುಗಿತು.
ಬಂಡೀಮಠ ಅಭಿಷೇಕ ಅಡಿಗರಿಂದ ಪೂಜಾ ಕಾರ್ಯ ಜರುಗಿತು.ಗುರಿಕಾರ ಅಚ್ಚುತ ನಾಯ್ಕ್ ಮತ್ತು ಶಾರದಾ ನಾಯ್ಕ ಸಂಕಲ್ಪ ಪೂಜೆಯಲ್ಲಿ ಭಾಗವಹಿಸಿದ್ದರು.
ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಕೂರಾಡಿ ಮತ್ತು ಶ್ರೀ ಮಟಪಾಡಿ ಚಂಡಿಕಾ ದುರ್ಗಾ ಪರಮೇಶ್ವರಿ ಭಜನಾ ಮಂಡಳಿಯಿಂದ ಭಜನಾ ಕಾರ್ಯ ಕ್ರಮ ಜರುಗಿತು. ಪರಿಸರದ ಹಲವಾರು ಭಕ್ತರು ಭಾಗವಹಿಸಿದ್ದರು.