ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಶ್ರೀಬ್ರಹ್ಮಲಿಂಗವೀರಭದ್ರ ಶ್ರೀದುರ್ಗಾ ಪರಮೇಶ್ವರೀ ದೇವಸ್ಥಾನ ಬಾರಕೂರಿನಲ್ಲಿ ಭಾನುವಾರ ತನಕ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ಹಾಲು ಹಬ್ಬ , ವಾರ್ಷಿಕ ಪೂಜೆ, ಢಕ್ಕೆ ಬಲಿ ಮತ್ತು ಗೆಂಡ ಸೇವೆ ಜರುಗಿತು.

ಶ್ರೀನಿವಾಸ್ ಶೆಟ್ಟಿಗಾರ್ ರಂಗನಕೆರೆ ಮತ್ತು ಯಶೋಧ ಶೆಟ್ಟಿಗಾರ್ ದಂಪತಿಗಳಿಂದ ರಮೇಶ್ ಭಟ್ ನಾಯರ್ ಬೆಟ್ಟು ಇವರ ನೇತೃತ್ವದಲ್ಲಿ ಸೇವಾ ರೂಪದಲ್ಲಿ ಚಂಡಿಕಾ ಹೋಮ ಜರುಗಿತು.

ಬಳಿಕ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಶೆಟ್ಟಿಗಾರ್ ಮಾತನಾಡಿ, ದೇವಸ್ಥಾನಕ್ಕೆ ಸಭಾ ಭವವದ ಕುರಿತು ಪ್ರಯತ್ನ ಮತ್ತು ಬ್ರಹ್ಮಕಲಶೋತ್ಸವಕ್ಕೆ ಕೂಡಾ ಸಿದ್ದತೆ ನಡೆಯುತ್ತಿದ್ದು, ಸಮಾಜದವರ ನೆರವು ಅಗತ್ಯವಾಗಿದೆ ಎಂದರು.

ಇದೇ ಸಂದರ್ಬದಲ್ಲಿ ಸಮಾಜದ ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ಗೌತಮ್ ಬಾರಕೂರು, ಡಾ.ಚಂದ್ರ ಶೇಖರ್, ಡಾ.ಸಂಚಿತ ಶೆಟ್ಟಿಗಾರ್, ಪ್ರಗತಿಪರ ಕೃಷಿಕ ತಿಮ್ಮಪ್ಪ ಶೆಟ್ಟಿಗಾರ್, ಗ್ರಾಮಾಭಿವೃದ್ಧಿ ಯಜನೆಯ ವಲಯಾಧ್ಯಕ್ಷ ಕರುಣಾಕರ ಶೆಟ್ಟಿಗಾರ್, ಮಂದಾರ್ತಿ ಸಬ್ ಪೋಸ್ಟ್ ಮಾಸ್ಟರ್ ಸರೋಜ ವಸಂತ್ ಅವರನ್ನು ಸನ್ಮಾನಿಸಲಾಯಿತು.

ಆಡಳಿತ ಮೋಕ್ತೇಸರ ಡಾ.ಜಯರಾಮ ಶೆಟ್ಟಿಗಾರ್ ಸಹ ಮೊಕ್ತೇಸರರು ಮತ್ತು ಆಡಳಿತ ಮಂಡಳಿ, ಮಾಗಣೆ ಗುರಿಕಾರರು, ಬ್ರಹ್ಮಕಲಶೋತ್ಸವ ಸಮಿತಿ, ಶ್ರೀ ದುರ್ಗಾ ಪರಮೆಶ್ವರೀ ಮಹಿಳಾ ವೇದಿಕೆ ಹಾಗೂ ಸಂಘಟನಾ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.


































