Connect with us

Hi, what are you looking for?

Diksoochi News

ಕರಾವಳಿ

ಉಡುಪಿ : ಫೆ.25 ರಿಂದ 27 ರ ವರೆಗೆ ಮುರಾರಿ – ಕೆದ್ಲಾಯ ರಂಗೋತ್ಸವ

1

ಉಡುಪಿ : ರಥಬೀದಿ ಗೆಳೆಯರು ಸಾಂಸ್ಕೃತಿಕ ವೇದಿಕೆ ವತಿಯಿಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ಎಂ.ಜಿ.ಎಂ.ಕಾಲೇಜು ಉಡುಪಿ, ಡಾ.ಎನ್. ಮುರಾರಿ ಬಲ್ಲಾಳ್ ಚಿಂತನ ಫೌಂಡೇಶನ್ ಅಂಬಲಪಾಡಿ ಸಹಕಾರದಲ್ಲಿ ಡಾ.ನಿ.ಮುರಾರಿ ಬಲ್ಲಾಳ್, ಪ್ರೊ.ಕೆ.ಎಸ್.ಕೆದ್ಲಾಯ ಸವಿನೆನಪಿನಲ್ಲಿ ಮುರಾರಿ – ಕೆದ್ಲಾಯ ರಂಗೋತ್ಸವ ಫೆಬ್ರವರಿ 25, 26, 27 ರಂದು ಎಂ.ಜಿ.ಎಂ ಕಾಲೇಜಿನ ಮುದ್ದಣ್ಣ ಮಂಟಪದಲ್ಲಿ ನಡೆಯಲಿದೆ.
ಫೆಬ್ರವರಿ 25 ರ ಸಂಜೆ 6.30ಕ್ಕೆ ನೆಲಮಂಗಲ, ಯುವರಂಗ ನಿರ್ದೇಶಕ ಲಕ್ಷ್ಮಣ ಕೆ.ಪಿ. ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ಎಸ್.ನಾಯ್ಕ್, ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ನಾಟಕಗಳು :
ಫೆ. 25, ಶುಕ್ರವಾರ, ಸಂಜೆ 7.30 ಕ್ಕೆ
ರಂಗಾಯಣ – ಶಿವಮೊಗ್ಗ ಅಭಿನಯಿಸುವ ಕನ್ನಡ ನಾಟಕ
‘ವಿ ದ ಪೀಪಲ್ ಆಫ್ ಇಂಡಿಯಾ’
ರಚನೆ : ಡಾ.ರಾಜಪ್ಪ ದಳವಾಯಿ
ನಿರ್ದೇಶನ : ಲಕ್ಷ್ಮಣ ಕೆ.ಪಿ.
ಸಹ ನಿರ್ದೇಶನ : ಸಂಧ್ಯಾ ಅರಕೆರೆ

ಫೆ.26, ಶನಿವಾರ, ಸಂಜೆ 7.30 ಕ್ಕೆ
ನಾಟ್ಯ ಶಿವ – ಮೈಸೂರು
ಅಭಿನಯಿಸುವ ಕನ್ನಡ ನಾಟಕ
ಐ ಡ್ರೀಮ್
ಬಿಫೋರ್ ಐ ಟೇಕ್ ದಿ ಸ್ಟ್ಯಾಂಡ್
ಮೂಲ : ಅರ್ಲೆನ್ ಹಟನ್
ಕನ್ನಡಕ್ಕೆ : ಪ್ರತಿಭಾ ನಂದ ಕುಮಾರ್
ಪರಿಕಲ್ಪನೆ/ನಿರ್ದೇಶನ : ಸಾಲಿಯಾನ್ ಉಮೇಶ್ ನಾರಾಯಣ

Advertisement. Scroll to continue reading.

ಫೆ.27, ಭಾನುವಾರ, ಸಂಜೆ 7.30 ಕ್ಕೆ
ಲಿಟ್ಲ್ ಅರ್ಥ್ ಸ್ಕೂಲ್ ಆಫ್ ಥಿಯೇಟರ್ ಆರ್ಟ್ – ಕೇರಳ ಅಭಿನಯಿಸುವ ಮಲೆಯಾಳಿ ನಾಟಕ
ಬೊಲಿವಿಯನ್ ಸ್ಟಾರ್ಸ್
ಮೂಲ ಕಥೆ : ಪಿ.ವಿ.ಶಾಜಿ ಕುಮಾರ್
ರಂಗರೂಪ/ ವಿನ್ಯಾಸ / ನಿರ್ದೇಶನ : ಅರುಣ್ ಲಾಲ್

Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

1 ಶಿರ್ವ : ಶಿರ್ವ ಸಂತ ಮೇರಿ ಪದವಿ ಪೂರ್ವ ಕಾಲೇಜಿನ ಮಹಿಳಾ ಸಂಘ ‘ಧಾರಿಣಿ’ಯ ಉದ್ಘಾಟನೆ ಇತ್ತೀಚೆಗೆ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸರಿತಾ ಆಲ್ವ,  ಯಶಸ್ಸು ಎನ್ನುವುದು ರಾತ್ರೋ ರಾತ್ರಿ...

error: Content is protected !!