ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರ ಗೇರಿ ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯ ಕೊಚ್ಚಿನ್ ಶ್ರೀ ಕ್ಷೇತ್ರ ಧರ್ಮಸ್ಥಾಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಗೇರು ಬೆಳೆ ಮತ್ತು ನೈಸರ್ಗಿಕ ಕೃಷಿ ವಿಚಾರ ಸಂಕೀರ್ಣ ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರದಲ್ಲಿ ಶನಿವಾರ ಜರಗಿತು.

ಆಧುನಿಕ ಭಗೀರಥ ಪದ್ಮಶ್ರೀ ಮಹಾಲಿಂಗ ನಾಯ್ಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಅವರು ಮಾತನಾಡಿ ಕುಡಿಯಲು ಕೂಡಾ ನೀರು ಇಲ್ಲದ ಬರಡು ಭೂಮಿಯಲ್ಲಿ ಶ್ರಮ ಪಟ್ಟು ನೀರು ಬರುವಂತೆ ಮಾಡಿದ ಕಾರಣ ನಾನು ದೇಶಕ್ಕೆ ಪರಿಚಯವಾದೆ. ನೀರನ್ನು ಹಿಡಿದಿಡುವ ಮತ್ತು ಸಂರಕ್ಷಿಸುವ ಕೆಲಸವನ್ನು ಪ್ರತಿಯೊಬ್ಬ ರೈತರು ಮಾಡ ಬೇಕು ಎಂದರು.

ಈ ಸಂದರ್ಭ ಕೃಷಿಕರ ಪರವಾಗಿ ಅವರನ್ನು ಸನ್ಮಾನಿಸಲಾಯಿತು.

ಇಲಾಖೆಯ ವಿಸ್ತರಣಾ ನಿರ್ದೇಶಕ ಡಾ.ಬಿ. ಹೆಮ್ಲಾ ನಾಯಕ್ ದಿಕ್ಸೂಚಿ ಭಾಷಣ ಮಾಡಿದರು.
ಡಾ.ಲಕ್ಷ್ಮಣ್ , ಡಾ. ಧನಂಜಯ್ , ಡಾ ಸುಧೀರ್ ಕಾಮತ್ , ಚಾಂತಾರು ಗ್ರಾಮ ಪಂಚಾಯತಿ ಅಧ್ಯಕ್ಷೆ ಮೀರಾ ಸದಾನಂದ ಪೂಜಾರಿ, ರಾಘವೇಂದ್ರ ರಾವ್ ಉಪ್ಪೂರು , ಗಣೇಶ್ ಬಿ, ಚಂದ್ರ ಶೇಖರ ಉಡುಪ ಕೆಂಚನೂರು ಸೇರಿದಂತೆ ಅನೇಕ ಪ್ರಗತಿ ಪರ ಕೃಷಿಕರು ಗೇರು ಬೆಳೆಗಾರು ಉಪಸ್ಥಿತರಿದ್ದರು.
ನಾನಾ ತಳಿಯ ಗೇರು ಹಣ್ಣು ಮತ್ತು ಗೇರು ಉತ್ಪನ್ನಗಳು ಪ್ರದರ್ಶನಗಳು ಇದ್ದವು.




































