ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ರೋಟರಿ ಕ್ಲಬ್ ಬಾರಕೂರು, ಪ್ರಸಾದ್ ನೇತ್ರಾಲಯ ಉಡುಪಿ, ಯುವವಾಹಿನಿ ಯಡ್ತಾಡಿ ಘಟಕ, ಪ್ರಾಥಮಿಕ ಆರೋಗ್ಯ ಕೇಂದ್ರ ಬಾರಕೂರು ಇವರ ವತಿಯಿಂದ ಉಚಿತ ನೇತ್ರ ತಪಾಸಣೆ ಮತ್ತು ಪೊರೆ ಶಸ್ತ್ರ ಚಿಕಿತ್ಸೆ ಶಿಬಿರ ಭಾನುವಾರ ಬಾರಕೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜರುಗಿತು.

ಬಾರಕೂರು ಉದ್ಯಮಿ ಗೋಕುಲ್ ದಾಸ್ ಕಾಮತ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ರೋಟರಿ ಅಸಿಸ್ಟೆಂಟ್ ಗವರ್ನರ್ ಕೆ.ಪಿ ಕಾಂಚನ್ ಮಾತನಾಡಿ, ರೋಟರಿ ಪ್ರಪಂಚದ ತುರ್ತು ಸಮಯದಲ್ಲಿ ಮಾನವರೀಗೆ ನೆರವಾಗುವ ಸೇವಾ ಸಂಸ್ಥೆಯಾಗಿದೆ. ಇದೀಗ ಯುದ್ಧ ಭೂಮಿಯಾದ ಉಕ್ರೇನ್ನಲ್ಲಿ ಕೂಡಾ ಮನುಷ್ಯರಿಗೆ ಅಗತ್ಯ ಇರುವ ಆಹಾರ ನೀರು ವ್ಯವಸ್ಥೆಗೆ ರೋಟರಿ ಭಾಗಿಯಾಗಿದೆ. ಇಂದಿನ ಉಚಿತ ವೈದ್ಯಕೀಯ ಶಿಬಿರದ ಪ್ರಯೋಜನವನ್ನು ಜನರು ಸದುಪಯೋಗ ಪಡೆಯಬೇಕು ಎಂದರು.

ರೋಟರಿ ಅಧ್ಯಕ್ಷ ಚರಣ್ ಶೆಟ್ಟಿ , ಡಾ.ರೋಹಿಣಿ, ಡಾ. ಸೀಮಾ, ಸೋಮಪ್ಪ ಪೂಜಾರಿ, ವಿಜಯ ಕುಮಾರ ಶೆಟ್ಟಿ ಉಪಸ್ಥಿತರಿದ್ದರು.

ಬಾರಕೂರು ಭಾಗದ ನೂರಾರು ಮಂದಿ ಶಿಬಿರದ ಪ್ರಯೋಜನ ಪಡೆದರು.



































