ವರದಿ : ದಿನೇಶ್ ರಾಯಪ್ಪನ ಮಠ
ಕುಂದಾಪುರ : ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಸಾಮಾಜಿಕ ಕಾರ್ಯಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರನ್ನು ಗುರುತಿಸಿ ಅಭಿನಂದಿಸುವ ಕಾರ್ಯಕ್ರಮ ನಡೆಯಿತು.
ಕುಂದಾಪುರದ ಮದ್ದುಗುಡ್ಡೆ ನಿವಾಸಿ ಯಕ್ಷರಂಗದ ಪ್ರಸಂಗಕರ್ತೆ ಶ್ರೀಮತಿ ಶಾಂತಾ ವಾಸುದೇವ ಪೂಜಾರಿ ಮತ್ತು ಕುಂಭಾಶಿಯ ಕೊರವಡಿ ನಿವಾಸಿ ಲಲಿತಾ ಇವರ ಮನೆಗೆ ತೆರಳಿ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಕುಂದಾಪುರ ಮಂಡಲ ಬಿಜೆಪಿ ಅಧ್ಯಕ್ಷ ಶಂಕರ್ ಅಂಕದಕಟ್ಟೆ, ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ವಕ್ವಾಡಿ, ಸುರೇಶ್ ಶೆಟ್ಟಿ ಗೋಪಾಡಿ,ಸದಾನಂದ ಬಳ್ಕೂರು, ಸುರೇಂದ್ರ ಸಂಗಮ್, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ರೂಪ ಪೈ, ಅನಿತಾ ಶ್ರೀಧರ್, ಸೌರಬಿ ಪೈ, ರೋಹಿಣಿ ಪೈ, ಜಯಲಕ್ಷ್ಮಿ ಗಾಣಿಗ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ, ಪುರಸಭೆ ಸದಸ್ಯ, ರಾಘವೇಂದ್ರ ಕಾರ್ವಿ ಮದ್ದುಗುಡ್ಡೆ, ಶ್ವೇತಾ ಸಂತೋಷ್, ಪುಷ್ಪ ಶೆಟ್, ವನಿತಾ ಬಿಲ್ಲವ, ಶ್ವೇತ, ಸುನಿಲ್ ಕಾರ್ವಿ, ಅಭಿಷೇಕ್ ಅಂಕದಕಟ್ಟೆ,ಹಾಗೂ ಇನ್ನಿತರ ಮಹಿಳಾ ಮೋರ್ಚಾ ಸದಸ್ಯರು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.


































