ಬ್ರಹ್ಮಾವರ : ಕೋಡಿ ಬೆಂಗ್ರೆಯಲ್ಲಿ 75 ವರ್ಷದ ಹಿಂದೆ ಭಜನಾ ಮಂದಿರವಾಗಿದ್ದು ಇದೀಗ ದೇವಸ್ಥಾನವಾಗಿ ರೂಪುಗೊಂಡ ಶ್ರೀ ವಿಠಲ ರುಖುಮಾಯಿ ದೇವಸ್ಥಾನದಲ್ಲಿ ಬುಧವಾರ ನಾನಾ ಧಾರ್ಮೀಕ ಕಾರ್ಯಕ್ರಮದೊಂದಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಜರುಗಿತು.

ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಶ್ರೀ ಪಾದರು ಮತ್ತು ಬಾಳೆಕುದ್ರು ಶ್ರೀ ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿಯವರನ್ನು ತೆರೆದ ವಾಹನಲ್ಲಿ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಣಿಯೂರು ಮಠದ ಶ್ರೀಗಳು ಮಾತನಾಡಿ, ಭಜನೆಯಲ್ಲಿ ತೊಡಗಿಸಿಕೊಂಡು ಮಾದರಿಯಾದ ಸಮುದ್ರ ತೀರದ ಕೋಡಿ ಗ್ರಾಮ ಗುಟ್ಕಾ ಮುಕ್ತ ಊರು ಎನ್ನುವುದು ಮಾದರಿಯಾಗಿದೆ ಎಂದರು.
ಬಾಳೆಕುದ್ರು ಶ್ರೀಗಳು ಮಾತನಾಡಿ ಭಜನೆಯಿಂದ ಹೃದಯರೋಗ ಮುಕ್ತವಾಗುತ್ತದೆ ಎನ್ನುವುದನ್ನು ನಮ್ಮ ಪೂರ್ವಿಕರು ಕಂಡುಕೊಂಡ ಸತ್ಯವಾಗಿದೆ ಭಜನೆ ಇರುವಲ್ಲಿ ವಿಭಜನೆ ಇರದು ಎಂದರು.

ಇದೇ ಸಂದರ್ಬದಲ್ಲಿ ತಂತ್ರಿಗಳನ್ನು ಮತ್ತು 75 ವರ್ಷದಿಂದಲೂ ದೇವಸ್ಥಾನಕ್ಕೆ ತೊಡಗಿಸಿಕೊಂಡವರನ್ನು ಮತ್ತು ಸಮಿತಿಯ ಶಂಕರ ಕುಂದರ್ , ಚಂದ್ರ ಕುಂದರ್ ಇವರನ್ನು ಸನ್ಮಾನಿಸಲಾಯಿತು.

ಮಾಜಿ ಸಚಿವ ಪ್ರಮೋಧ ಮದ್ವರಾಜ್ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.
ಕೋಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರಭಾಕರ, ಮೆಂಡನ್ ತೋನ್ಸೆ ಜಯಕೃಷ್ಣ ಶೆಟ್ಟಿ,ಉದ್ಯಮಿ ಆನಂದ ಸಿ ಕುಂದರ್, ಅನೂಪ್ ಟ್ರೆಹೋನ್ ,ನಿತ್ಯಾನಂದ ಕೊಟ್ಯಾನ್, ಸುಭಾಷ್ ಮೆಂಡನ್ ಮತ್ತು ಊರಿನ ನಾನಾ ದೇವಸ್ಥಾನ ಸಂಘ ಸಂಸ್ಥೆಗಳ ಮುಖ್ಯಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆರು ವರ್ಷ ದ ಬಾಲಕ ಬಾಲಕಿಯರಿಂದ ಕುಣಿತ ಭಜನೆ ಜರುಗಿತು.



































