ಪೆರ್ಡೂರು : ಕೊಳಂಬೆಯಲ್ಲಿ ವಿದ್ಯಾಪೋಷಕ್ ವಿದ್ಯಾರ್ಥಿಗಳಾದ ಪ್ರಶಾಂತ್ ಕುಮಾರ್ (ಅಂತಿಮ ಬಿ.ಇ) ಹಾಗೂ ಪವಿತ್ರಾ (ತೃತೀಯ ಬಿ.ಎಸ್ಸಿ) ಇವರಿಗೆ ಮನೆಯ ಹಸ್ತಾಂತರ ಕಾರ್ಯಕ್ರಮ ಶನಿವಾರದಂದು ನೆರವೇರಿತು.
ಗುಂಡಿಬೈಲು ಲಕ್ಷ್ಮೀ ಮತ್ತು ಅಚ್ಯುತ ಭಟ್ ಇವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಅಚ್ಯುತ ಭಟ್ ದಂಪತಿಗಳ ಸುಪುತ್ರರಾದ ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಮತ್ತು ಜಿ. ವಿಷ್ಣುಮೂರ್ತಿ ಭಟ್ ಮನೆಯ ಪ್ರಾಯೋಜಕತ್ವ ವಹಿಸಿ ತಮ್ಮ ತೀರ್ಥ ರೂಪರ ಸಪ್ತತಿಯನ್ನು ವಿಶಿಷ್ಟವಾಗಿ ಆಚರಿಸಿ ಔದಾರ್ಯ ಮೆರೆದರು. ಇದು ಸಂಸ್ಥೆ ನಿರ್ಮಿಸಿದ 23ನೇ ಮನೆಯಾಗಿದೆ.