ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಹಿಜಾಬ್ ಕುರಿತ ಹೈಕೋರ್ಟ್ ತೀರ್ಪಿಗೆ ಸಂಭಂದಿಸಿದಂತೆ ಬ್ರಹ್ಮಾವರ ತಾಲೂಕು ದಂಡಾಧಿಕಾರಿ ರಾಜಶೇಖರ ಮೂರ್ತಿಯವರು ಬುಧವಾರ ಹಂದಾಡಿ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಶಾಂತಿ ಪಾಲನಾ ಸಭೆ ಜರುಗಿತು.
ಈ ಸಂದರ್ಭ ಅವರು ಮಾತನಾಡಿ, ನ್ಯಾಯಾಲಯದ ಆದೇಶವನ್ನು ನಾವೆಲ್ಲರೂ ಪಾಲನೆ ಮಾಡಬೇಕು. ಮುಂದೆ ತೀರ್ಪಿನ ಕುರಿತು ಪ್ರಶ್ನಿಸುವ ಅಧಿಕಾರ ಎಲ್ಲರಿಗೂ ಇದೆ. ಆದರೆ ತೀರ್ಪಿಗೆ ವಿರುದ್ಧವಾಗಿ ವರ್ತಿಸಿದರೆ ನ್ಯಾಯಾಂಗ ನಿಂದನೆಯಾಗಲಿದೆ. ಆದುದರಿಂದ ಬ್ರಹ್ಮಾವರ ಭಾಗದಲ್ಲಿ ಈತನಕ ಯಾವೂದೇ ಅಹಿತಕರ ಘಟನೆ ಸಂಭವಿಸಿಲ್ಲ. ಮುಂದೆಯೂ ಕೂಡಾ ಸಂಭವಿಸದಂತೆ ಸಹಕರಿಸಿ ಎಂದು ತಿಳಿಸಿ ನ್ಯಾಯಾಲಯದ ತೀರ್ಪನ್ನು ಸಭೆಯ ಮುಂದೆ ತಿಳಿಸಿದರು.


ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್ ಬಿ.ಬಿ, ಬ್ರಹ್ಮಾವರ ಠಾಣಾಧಿಕಾರಿ ಗುರುನಾಥ್ ಬಿ. ಹಾದಿಮನೆ, ಬ್ರಹ್ಮಾವರ ತಾಲೂಕೂ ಪಂಚಾಯತಿ ಕಾರ್ಯ ನಿರ್ವಣಾಧಿಕಾರಿ ಇಂಬ್ರಾಹಿಂ ಪುರ್ ವೇದಿಕೆಯಲ್ಲಿದ್ದರು.

ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ, ವಿಶ್ವ ಹಿಂದೂ ಪರಿಷದ್ ಭಜರಂಗ ದಳದ ಅಧ್ಯಕ್ಷ ರಾಘವೇಂದ್ರ ಕುಂದರ್ ಜೆ.ಬಿ, ತಾಜುದ್ಧಿನ್ ಇಬ್ರಾಹಿಂ ನಾನಾ ಭಾಗದ ಶಾಲಾ ಕಾಲೇಜು ಪ್ರಿನ್ಸಿಪಾಲರು ಭಾಗವಹಿಸಿದ್ದು ಅಭಿಪ್ರಾಯ ವ್ಯಕ್ತಪಡಿಸಿದರು.

































