ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಶ್ರೀಬ್ರಹ್ಮ ಬೈದರ್ಕಳ ಹಾಗೂ ಚಿಕ್ಕಮ್ಮ ದೇವಿ ಗರಡಿ ಪಿಳ್ಕಳ ಉಪ್ಪೂರು ಇಲ್ಲಿ ಕೊರೋನ ಹಿನ್ನೆಲೆಯಲ್ಲಿ ಜಿರ್ಣೋದ್ಧಾರ ಗೊಂಡ ಬಳಿಕ ಜರುಗಿದ ಕಾಲಾವಧಿ ನೇಮೋತ್ಸವ ನಾನಾ ಧಾರ್ಮಿಕ ಕಾರ್ಯಕ್ರಮದೊಂದಿಗೆ ಶುಕ್ರವಾರದ ತನಕ ಜರುಗಿತು.

ಗುರುವಾರ ಜರುಗಿದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ದೇವಸ್ಥಾನಗಳಲ್ಲಿ ನಾನಾ ವಿಧದ ಆಯ ಅಳತೆಗಳು ಇದ್ದರೆ ಏಕ ರೂಪದ ಅಳತೆಗಳು ಮಾದರಿಗಳು ಇರುವುದು ಗರಡಿಯಲ್ಲಿ ಮಾತ್ರವಾಗಿದ್ದು, ಇದು ಸಮಾನತೆಯನ್ನು ಸೂಚಿಸುತ್ತದೆ ಎಂದರು.

ಗರಡಿಯ ಅಧ್ಯಕ್ಷ ರಾಜು ಪೂಜಾರಿ ಮಾತನಾಡಿ, ಒಂದೇ ಗ್ರಾಮದಲ್ಲಿ ಎರಡು ಗರಡಿ ಇದ್ದರೂ ಸರಕಾರ ಮತ್ತು ಹಲವಾರು ಜನರ ಆರ್ಥಿಕ ನೆರವಿನಿಂದ ಗರಡಿ ನಿರ್ಮಾವಾಗಲು ಸಾದ್ಯವಾಗಿದೆ ಎಂದರು.

ಗೊವಿಂದ ಬಾಬು ಪೂಜಾರಿ, ಕುಶಲ್ ಶೆಟ್ಟಿ ನರ್ನಾಡು, ಜಯಕರ ಶೆಟ್ಟಿ ನರ್ನಾಡು, ಅರುಣ್ ಕರ್ಕೆರಾ, ಸುಂದರ್ ಶೆಟ್ಟಿ ಬೈಕಾಡಿ, ನ್ಯಾಯವಾದಿ ಸಂಕಪ್ಪ ಏ, ಕೃಷ್ಣ ರಾಜ ಕೋಟ್ಯಾನ್, ವಿಠಲ್ ಪೂಜಾರಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಗರಡಿಯ ಜಿರ್ಣೋದ್ಧಾರಕ್ಕೆ ಸಹಕರಿಸಿದ ದಾನಿಗಳನ್ನು ಸನ್ಮಾನಿಸಲಾಯಿತು.




































