ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ನಮೋ ಅಭಿಮಾನಿ ಬಳಗ ಬೈಕಾಡಿ ನೇತೃತ್ವದಲ್ಲಿ ಬಿಜೆಪಿ ಉಡುಪಿ ಗ್ರಾಮಾಂತರ ಸಹಯೋಗದೊಂದಿಗೆ ಶಾಸಕ ಕೆ.ರಘುಪತಿ ಭಟ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಫೆಬ್ರವರಿ 24 ರಂದು ಬೈಕಾಡಿ ಯಲ್ಲಿ ನಡೆದಂತಹ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಉಚಿತ ಕನ್ನಡಕಕ್ಕೆ ಆಯ್ಕೆಯಾದ ಶಿಬಿರಾರ್ಥಿಗಳಿಗೆ ಇಂದು ಬ್ರಹ್ಮಾವರ ಬಿಜೆಪಿ ಕಛೇರಿಯಲ್ಲಿ ಕನ್ನಡಕವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕರ ಪತ್ನಿ ಶಿಲ್ಪಾ.ಆರ್. ಭಟ್, ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ವೀಣಾ. ವಿ. ನಾಯಕ್, ಕಾರ್ಯದರ್ಶಿ ಸಚಿನ್ ಪೂಜಾರಿ, ಪಕ್ಷದ ಪ್ರಮುಖರಾದ ಉಪ್ಪುರ್ ರಾಜು ಪೂಜಾರಿ, ರಘುಪತಿ ಬ್ರಹ್ಮಾವರ, ರಘುರಾಮ ಶೆಟ್ಟಿ, ವಸಂತಿ. ಎಸ್. ಪೂಜಾರಿ, ಮೀರಾ ಸದಾನಂದ ಪೂಜಾರಿ,ಚಂದ್ರಶೇಖರ ಬೈಕಾಡಿ, ಕೃಷ್ಣ ಪ್ರಸಾದ ಹಾಸ್ಪಿಟಲ್ ನ ಪ್ರತಿನಿಧಿ ಹರೀಶ್ ಕುಮಾರ್ ಕಾರ್ಯಕರ್ತರು ಮತ್ತು ಬೈಕಾಡಿ ನಮೋ ಅಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು.

ಸಚಿನ್ ಸ್ವಾಗತಿಸಿದರು. ಜನಾರ್ಧನ್ ಕುಂದರ್ ವಂದಿಸಿದರು. ಚಂದ್ರಶೇಖರ ಕಾರ್ಯಕ್ರಮ ನಿರೂಪಿಸಿದರು.




































