ಪರ್ಕಳ : ಬೈಕ್ ಗೆ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟಿರುವ ಘಟನೆ ಕಡಿಯಾಳಿಯಲ್ಲಿ ನಡೆದಿದೆ. ಪರ್ಕಳದ ಹೃದಯಭಾಗದಲ್ಲಿರುವ ಮೆಡಿಕಲ್ ಶಾಪಿನ ಮಾಲಕ ವಾಮನ ನಾಯಕ್ ಮೃತಪಟ್ಟವರು.
ವಾಮನ ಅವರು ಬೆಳಿಗ್ಗೆ 8 ಗಂಟೆ ಸುಮಾರಿಗೆ ತಮ್ಮ ಮಗನನ್ನು ಉಡುಪಿಯಲ್ಲಿ ಕೆಲಸಕ್ಕಾಗಿ ಬಿಟ್ಟು ವಾಪಾಸಾಗುತ್ತಿದ್ದ ವೇಳೆ, ಕಡಿಯಾಳಿ ಬಳಿ ವಿದ್ಯಾರ್ಥಿನಿ ಚಲಾಯುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.
ಪರಾರಿಯಾಗಿದ್ದ ವಿದ್ಯಾರ್ಥಿನಿ ಹಾಗೂ ಕಾರನ್ನು ವಶಕ್ಕೆ ಪಡೆಯಲಾಗಿದೆ. ಉಡುಪಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರಿಣಾಮ ತಲೆಗೆ ತೀವ್ರ ಏಟಾಗಿ, ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ನಂತರ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ, ನಿಧನ ಹೊಂದಿದ್ದಾರೆ.
ಮೃತರ ಉತ್ತಮ ಭಜನೆ ಭಕ್ತಿಗೀತೆ, ಹಾಗೂ ಸಂಗೀತದ ಪರಿಕರಗಳನ್ನು ನುಡಿಸುತ್ತಿದ್ದರು. ಉಡುಪಿಯ ಸುತ್ತಮುತ್ತ ಧಾರ್ಮಿಕ ಕಾರ್ಯಕ್ರಮಗಳಿಗೆ ಹಾಡುಗಾರಿಕೆಯ ಮೂಲಕ ಜನಮನ್ನಣೆ ಗಳಿಸಿದ್ದರು.
ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಪರ್ಕಳದ ಮೋಹನ್ ದಾಸ್ ನಾಯಕ್, ಗಣೇಶ್ ರಾಜ್ ಸರಳೇಬೆಟ್ಟು ತೀವ್ರಸಂತಾಪ ವ್ಯಕ್ತಪಡಿಸಿದ್ದಾರೆ.



































