ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬಾರಕೂರು ಹನೆಹಳ್ಳಿ ಗ್ರಾಮ ಪಂಚಾಯತಿ ಬಳಿಯ ಕಟ್ಟಡದಲ್ಲಿ ಶ್ರೀ ಬಟ್ಟೆ ವಿನಾಯಕ ಸಂಜೀವಿನಿ ಒಕ್ಕೂಟದ ಕಛೇರಿಯನ್ನು ಬುಧವಾರ ಗ್ರಾಮ ಪಂಚಾಯತಿ ಅಧ್ಯಕ್ಷ ಚಂದ್ರ ಶೇಖರ ಶೆಟ್ಟಿ ಉದ್ಘಾಟಿಸಿದರು.
ಈ ಸಂದರ್ಭ ಸಹಾಯಕ ಯೋಜನಾಧಿಕಾರಿ ಜೇಮ್ಸ್ ಮಾತನಾಡಿ, ಇನ್ನೊಬ್ಬರ ಆಲಸ್ಯ ಕ್ರಿಯಾಶೀಲರ ಆಸ್ತಿಯಾಗಬೇಕು. ಅದನ್ನು ಸಂಜೀವಿನಿ ಒಕ್ಕೂಟಗಳು ಪಡೆದುಕೊಳ್ಳ ಬೇಕು.


ಪ್ಲ್ಯಾಟ್ ಸಂಸ್ಕೃತಿ ಹೆಚ್ಚಾಗುತ್ತಿರುವ ಇಂದಿನ ದಿನದಲ್ಲಿ ಅವರ ಬೇಕು ಬೇಡಿಕೆಗಳಿಗೆ ಸಂಜೀವಿನಿಯಂತಹ ಸಂಘಟನೆಗಳಿಂದ ನೇರ ಮಾರುಕಟ್ಟೆಯಿಂದ ಲಾಭ ಹೆಚ್ಚಿಸಿಕೊಳ್ಳಬಹುದು ಎಂದರು.

ತಾಲೂಕು ಒಕ್ಕೂಟದ ಕೃಷ್ಣ ಸಾಗರ, ಸಹಾಯಕ ಯೋಜನಾಧಿಕಾರಿ ಪಾಂಡುರಂಗ, ವಲಯ ಮೇಲ್ವಿಚಾರಕ ಸಂತೋಷ, ಹನೆಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅರುಂಧತಿ ಏಸುಮನೆ, ಕಾರ್ಯದರ್ಶಿ ಉಮೇಶ್ ಕಲ್ಯಾಣಪುರ, ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಪದ್ಮಾವತಿ, ಭಾರತೀಯ ವಿಕಾಸ ಟ್ರಸ್ಟ್ ನ ರಾಘವೇಂದ್ರ, ಒಕ್ಕೂಟದ ಅಧ್ಯಕ್ಷೆ ಪ್ರೇಮಲತಾ ಶೆಟ್ಟಿ, ಉಪಾಧ್ಯಕ್ಷೆ ಮಮತಾ , ಕಾರ್ಯದರ್ಶಿ ವೀಣಾ, ಕೋಶಾಧಿಕಾರಿ ಶೈಲಜಾ, ಗೃಹ ಉತ್ಪನ್ನಗಳ ತರಬೇತುದಾರರಾದ ಹೇಮಾ, ಸಂಜೀವಿನಿ ಸೇವಾ ಸದಸ್ಯರು ಮತ್ತು ಗ್ರಾಮ ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು.

37 ಸಂಘದ 370 ಒಕ್ಕೂಟದ ಸದಸ್ಯೆಯರಿಂದ ತಯಾರಾದ ಗೃಹ ಬಳಕೆಯ ವಸ್ತುಗಳು, ನಾನಾ ಉತ್ಪನ್ನಗಳು ಪ್ರದರ್ಶನ ಮತ್ತು ಮಾರಾಟ ನಡೆಯಿತು.



































